alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ಪ್ರವಾಸಿಗರ ಕುರಿತು ಬಹಿರಂಗವಾಗಿದೆ ಇಂಟ್ರೆಸ್ಟಿಂಗ್ ಮಾಹಿತಿ

ಕೈನಲ್ಲೊಂದು ಮೊಬೈಲ್. ಎಲ್ಲ ಸಾಮಾಜಿಕ ಜಾಲತಾಣದಲ್ಲಿ ಅಕೌಂಟ್. ಇದು ಸಾಮಾನ್ಯ ಸಂಗತಿಯಾಗಿದೆ. ಮಲಗುವ ಸಮಯದಿಂದ ಹಿಡಿದು ಸಣ್ಣಪುಟ್ಟ ವಿಚಾರಗಳನ್ನೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಕಣ್ಣ ಮುಂದಿರುವ ಜನರ ಜೊತೆ ಮಾತನಾಡುವ ಬದಲು ಮೊಬೈಲ್ ಚಾಟ್ ನಲ್ಲಿ ಜನರು ಬ್ಯುಸಿಯಾಗಿರ್ತಾರೆ.

ಕೆಲಸದ ಒತ್ತಡದಿಂದ ಸ್ವಲ್ಪ ರಿಲ್ಯಾಕ್ಸ್ ಆಗಲು ಜನರು ಪ್ರವಾಸ ಕೈಗೊಳ್ತಾರೆ ನಿಜ. ಆದ್ರೆ ಹೋದ ಸ್ಥಳದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಬದಲು ಮೊಬೈಲ್ ಗೆ ಅಂಟಿಕೊಳ್ಳುವವರ ಸಂಖ್ಯೆಯೇ ಹೆಚ್ಚು. ಇದನ್ನು ನಾವು ಹೇಳ್ತಿಲ್ಲ. ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಸಮೀಕ್ಷೆ ಪ್ರಕಾರ, ಪ್ರವಾಸಕ್ಕೆ ಹೋಗಿ ಖುರ್ಚಿಯಲ್ಲಿ ರಿಲ್ಯಾಕ್ಸ್ ಆಗುವ ಬದಲು ಶೇಕಡಾ 50ರಷ್ಟು  ಸಮಯವನ್ನು ಮೊಬೈಲ್ ನಲ್ಲಿ ಕಳೆಯುತ್ತಾರಂತೆ.

ಆನ್ಲೈನ್ ಬುಕ್ಕಿಂಗ್ ವೆಬ್ ಸೈಟ್ Hotel.com ನಡೆಸಿದ ಸರ್ವೆಯಲ್ಲಿ ಇದು ಬಹಿರಂಗವಾಗಿದೆ. ಸರ್ವೆ ಪ್ರಕಾರ ಪ್ರವಾಸದ ವೇಳೆ ಭಾರತದ ಶೇಕಡಾ 92 ರಷ್ಟು ಪ್ರವಾಸಿಗರು ಅತಿ ಹೆಚ್ಚು ಸಮಯವನ್ನು ಉಳಿದ ಸೈಟ್ ಗಿಂತ ಫೇಸ್ಬುಕ್ ನಲ್ಲಿ ಕಳೆಯುತ್ತಾರಂತೆ. ಪ್ರವಾಸದ ವೇಳೆ 2 ಗಂಟೆ ವಿಶ್ರಾಂತಿ ಪಡೆದ್ರೆ ಮತ್ತೆ ಮೂರುವರೆ ಗಂಟೆ ಫೇಸ್ಬುಕ್ ನಲ್ಲಿ ಕಳೆಯುತ್ತಾರಂತೆ.

ಶೇಕಡಾ 40ರಷ್ಟು ಪ್ರವಾಸಿಗರು ಪ್ರವಾಸಕ್ಕೆ ಹೋದ ಸ್ಥಳಗಳ ಫೋಟೋಗಳನ್ನು ಫೇಸ್ಬುಕ್ ಗೆ ಅಪ್ಲೋಡ್ ಮಾಡ್ತಾರಂತೆ. ಇನ್ನು ಶೇಕಡಾ 20ರಷ್ಟು ಪ್ರವಾಸಿಗರು ಸ್ನೇಹಿತರ ಹೊಟ್ಟೆ ಉರಿಸಲು ಫೋಟೋಗಳನ್ನು ಫೇಸ್ಬುಕ್ ಗೆ ಹಾಕ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...