alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ಪ್ರವಾಸಿಗರ ಕುರಿತು ಬಹಿರಂಗವಾಗಿದೆ ಕುತೂಹಲಕಾರಿ ಮಾಹಿತಿ

ವಿದೇಶ ಪ್ರವಾಸದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಖರ್ಚು ಮಾಡುವವರೆಂದರೆ ಭಾರತೀಯರು. ಹಾಗಂತ ಕೋಲಿಯರ್ಸ್ ಇಂಟರ್ ನ್ಯಾಷನಲ್ ಎಂಬ ಸಂಸ್ಥೆ ನಡೆಸಿರುವ ಅಧ್ಯಯನ ತಿಳಿಸಿದೆ.

2019 ರ ಏಪ್ರಿಲ್ 28ರಿಂದ ಮೇ 1 ರವರೆಗೆ ದುಬೈನಲ್ಲಿ ನಡೆಯಲಿರುವ ಅರೇಬಿಯನ್ ಟ್ರಾವೆಲ್ ಮಾರ್ಕೆಟ್(ಎಟಿಎಂ) ಹಿನ್ನೆಲೆಯಲ್ಲಿ ಈ ಸಂಸ್ಥೆ ಅಧ್ಯಯನ ನಡೆಸಿದ್ದು, ಅದರಲ್ಲಿ ಇಂಥದ್ದೊಂದು ಅಂಶವನ್ನು ಹೊರಗೆಡಹಿದೆ.

ಗಲ್ಫ್ ರಾಷ್ಟ್ರಗಳಿಗೆ 2022-37 ರ ಅವಧಿಯಲ್ಲಿ ಉದ್ಯಮಿಗಳು, ವೃತ್ತಿಪರರು, ಮನರಂಜನೆಗಾಗಿ ಹೋಗುವವರೂ ಸೇರಿ ಒಟ್ಟು 90 ಲಕ್ಷ ಭಾರತೀಯರು ಪ್ರವಾಸ ತೆರಳಲಿದ್ದಾರೆ. ಅಲ್ಲದೆ ವಿದೇಶ ಪ್ರವಾಸಕ್ಕೆ ತೆರಳಲಿರುವ ಭಾರತೀಯರು ಜಗತ್ತಿನಲ್ಲೇ ಅತ್ಯಧಿಕ ಖರ್ಚು ಮಾಡುವ ಪ್ರವಾಸಿಗರು. 2018ರಲ್ಲಿ 23 ಶತಲಕ್ಷ ಡಾಲರ್ ಇದ್ದ ಈ ಖರ್ಚಿನ ಪ್ರಮಾಣ 2022 ರ ಸುಮಾರಿಗೆ 45 ಶತಲಕ್ಷ ಡಾಲರ್ ಗೆ ತಲುಪಲಿದೆ ಎಂದು ಈ ಅಧ್ಯಯನ ತಿಳಿಸಿದೆ.

ಇನ್ನು ಯುಎನ್ ವರ್ಲ್ಡ್ ಟೂರಿಸಮ್ ಆರ್ಗನೈಸೇಷನ್ ವರದಿ ಪ್ರಕಾರ, ಭಾರತದಿಂದ ಹೊರಗೆ ಹೋಗುವ ಪ್ರವಾಸಿಗರ ಸಂಖ್ಯೆ ಶೇ. 122 ಹೆಚ್ಚಾಗಲಿದ್ದು, 2022 ರ ವೇಳೆಗೆ ಭಾರತೀಯ ವಿದೇಶಿ ಪ್ರವಾಸಿಗರ ಸಂಖ್ಯೆ 50 ದಶಲಕ್ಷಕ್ಕೆ ತಲುಪಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...