alex Certify
ಕನ್ನಡ ದುನಿಯಾ       Mobile App
       

Kannada Duniya

ಕಚ್ಚಿದ ಹಾವನ್ನೇ ತಿಂದು ತೇಗಿದ ಭೂಪ !

snake bihar

ಪಾಟ್ನಾ: ಕಲ್ಲುನಾಗರ ಕಂಡರೆ ಹಾಲೆರೆವರು, ದಿಟ ನಾಗರ ಕಂಡರೆ ಕೊಲ್ಲೆಂಬರಯ್ಯಾ ಎನ್ನುವಂತೆ, ಹಾವನ್ನು ಕಂಡ ಕೂಡಲೇ ಮಾರುದ್ದ ಓಡಿ ಹೋಗುವವರೆ ಜಾಸ್ತಿ. ಆದರೆ, ಇಲ್ಲೊಬ್ಬ ಭೂಪ ತನಗೆ ಕಚ್ಚಿದ ಹಾವನ್ನೇ ಕೈಯಲ್ಲಿಡಿದು ತಿಂದಿದ್ದಾನೆ.

ಬಿಹಾರದ ಲೋಹರ್ ದಗ ಜಿಲ್ಲೆಯ ಹರ್ಮು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸುರೇಂದ್ರ ಒರಾನ್ ಎಂಬಾತ ಕೆಲಸ ಮಾಡಲು ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ಹಾವೊಂದು ಕಚ್ಚಿಬಿಟ್ಟಿದೆ. ಹಾವು ಕಚ್ಚಿದಾಗ ಸ್ವಲ್ಪವೂ ಅಂಜದ ಸುರೇಂದ್ರ ಆ ಹಾವನ್ನು ಕೈಯಲ್ಲಿಡಿದುಕೊಂಡು ತಾನೂ ಕಚ್ಚಿದ್ದಾನೆ. ಮಾತ್ರವಲ್ಲ, ಹಾವನ್ನು ಕಚಕಚ ಜಗಿದು ನುಂಗಿದ್ದಾನೆ. ಕೂಡಲೇ ಸುರೇಂದ್ರನನ್ನು ಗ್ರಾಮಸ್ಥರು ಆಸ್ಪತ್ರೆಗೆ ಸೇರಿಸಿದ್ದು, ಆತ ಅಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸುರೇಂದ್ರ, ತಮ್ಮ ಆದಿವಾಸಿ ಸಮುದಾಯದಲ್ಲಿ ಕಚ್ಚಿದ ಹಾವನ್ನೇ ನಾವೂ ಕಚ್ಚಿ ತಿಂದರೆ, ಏನೂ ಆಗುವುದಿಲ್ಲ ಎಂಬ ನಂಬಿಕೆ ಇದೆ. ನನಗೆ, ಹಾವು ಕಚ್ಚಿದಾಗ ಅದೇ, ನೆನಪಿಗೆ ಬಂದು ಹಾವನ್ನು ಕಚ್ಚಿ ತಿಂದಿದ್ದೇನೆ ಎಂದು ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...