alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ಸ್ವೀಡನ್ ಜೋಡಿ

sweedan

ಸ್ವೀಡನ್ ನ ಜೋಡಿಹಕ್ಕಿಗಳು ದೇವನಗರಿ ವಾರಣಾಸಿಯಲ್ಲಿ ಹಿಂದೂ ಸಂಪ್ರದಾಯದಂತೆ ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ. ನಿಕ್ಲಸ್ ಅರೋನ್ಸನ್ ಹಾಗೂ ಟಿಲ್ಡಾ ಹೆನ್ರಿಕ್ಸನ್ ವೇದ ಮಂತ್ರಘೋಷಗಳ ನಡುವೆ ಸಪ್ತಪದಿ ತುಳಿದ್ರು.

ಪಕ್ಕಾ ಭಾರತೀಯ ಸಂಪ್ರದಾಯದಂತೆ ಅರೋನ್ಸನ್, ಶೇರ್ವಾನಿ ತೊಟ್ಟು ಕುದುರೆ ಏರಿ ಅಸ್ಸಿ ಘಾಟ್ ಬಳಿ ಇರುವ ಪಂಚರತ್ನ ಶಿವ ದೇವಾಲಯದಲ್ಲಿ ಬಂದ್ರು. ಕೈತುಂಬಾ ಮೆಹಂದಿ ರಂಗಿನೊಂದಿಗೆ ಬನಾರಸ್ ಸಾರಿ ಉಟ್ಟ ವಧು ಹೆನ್ರಿಕ್ಸನ್ ಸುಂದರವಾಗಿ ಕಂಗೊಳಿಸುತ್ತಿದ್ರು.

ಇವರಿಬ್ಬರಿಗೂ ಭಾರತದ ಸಂಸ್ಕೃತಿ ಮತ್ತು ಇಲ್ಲಿನ ದೇವಾಲಯಗಳೆಂದ್ರೆ ಅಚ್ಚುಮೆಚ್ಚು. ಗಂಗಾ ತಟದಲ್ಲಿ ಹೊಸ ಜೀವನಕ್ಕೆ ಕಾಲಿಡಬೇಕೆಂದು ನಿರ್ಧರಿಸಿದ್ರು. ಅರೋನ್ಸನ್ ಸ್ವೀಡನ್ ನಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಸದ್ಯದಲ್ಲೇ ಹೆನ್ಸಿಕ್ಸನ್ ಕೂಡ ಅದೇ ವೃತ್ತಿಯನ್ನು ಆರಂಭಿಸಲಿದ್ದಾರೆ. ಮದುವೆಯಲ್ಲಿ ಮೊಳಗಿದ ವೇದ ಮಂತ್ರ ಘೋಷಗಳು ನಮ್ಮಿಬ್ಬರ ಬಂಧವನ್ನು ಇನ್ನೂ ಗಟ್ಟಿಗೊಳಿಸಿದೆ ಎನ್ನುತ್ತಾರೆ ಅರೋನ್ಸನ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...