alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶಾಖಪಟ್ಟಣಂನಿಂದ ಬಸ್ತಿಗೆ ಬರಲು ಈ ರೈಲಿಗೆ ಹಿಡೀತು 4 ವರ್ಷ…!

ರೈಲಿನ ಕಥೆಯೊಂದು ಆಶ್ಚರ್ಯ ಹುಟ್ಟಿಸುವಂತಿದೆ. ನಾಲ್ಕು ವರ್ಷಗಳ ನಂತ್ರ ಸರಕು ರೈಲೊಂದು ತನ್ನ ಗಮ್ಯಸ್ಥಾನ ತಲುಪಿದೆ. ಈ ಸುದ್ದಿ ಕೇಳಿ ಎಲ್ಲರೂ ಆಶ್ಚರ್ಯಕ್ಕೊಳಗಾಗಿದ್ದಾರೆ. ರೈಲ್ವೆ ಇಲಾಖೆ ಮಾತ್ರ ಈ ಬಗ್ಗೆ ಸ್ಪಷ್ಟ ಹೇಳಿಕೆ ನೀಡ್ತಿಲ್ಲ.

2014 ರಲ್ಲಿ ಸರಕು ರೈಲು ವಿಶಾಖಪಟ್ಟಣಂನಿಂದ ಬಸ್ತಿಗೆ ಹೊರಟಿತ್ತು. ಸುಮಾರು 1400 ಕಿಲೋಮೀಟರ್ ಚಲಿಸಲು ರೈಲಿಗೆ 4 ವರ್ಷ ಬೇಕಾಯ್ತು. ಶನಿವಾರ ರೈಲು ಬಸ್ತಿ ತಲುಪಿದೆ. ರೈಲು ನಿಲ್ದಾಣಕ್ಕೆ ಬರ್ತಿದ್ದಂತೆ ಅಧಿಕಾರಿಗಳು ಆಶ್ಚರ್ಯಕ್ಕೊಳಗಾಗಿದ್ದಾರೆ. ರೈಲಿನಲ್ಲಿ 10 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳಿವೆ. ಆದ್ರೆ ಇದ್ರ ಮಾಲೀಕರು ಯಾರೆಂಬುದು ತಿಳಿದು ಬಂದಿಲ್ಲ. ರೈಲು ಇಲ್ಲಿಗೆ ಹೇಗೆ ಬಂತು ಎಂಬುದು ಸ್ಪಷ್ಟವಾಗಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ರೈಲಿನ ಬೋಗಿ ಹಾಳಾದಾಗ ಅದನ್ನು ರಿಪೇರಿಗೆ ಕಳುಹಿಸುತ್ತಾರೆ. ಬಹುಷಃ ಈ ರೈಲಿನ ಬೋಗಿ ಹಾಳಾಗಿದ್ದು, ರಿಪೇರಿಗೆ ಇಷ್ಟು ಸಮಯ ಹಿಡಿದಿರಬಹುದು ಎನ್ನುತ್ತಿದೆ ರೈಲ್ವೆ ಇಲಾಖೆ. ಆದ್ರೆ ಯಾವುದೇ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡ್ತಿಲ್ಲ. ರೈಲಿನಲ್ಲಿ ಗೊಬ್ಬರವಿದೆ ಎಂದು ಮೂಲಗಳು ಹೇಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...