alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೇ ನೌಕರರಿಗೆ ‘ಬಂಪರ್’ ಕೊಡುಗೆ

ರೈಲ್ವೇ ಇಲಾಖೆ ತನ್ನ ನೌಕರರಿಗೆ ‘ಸಿಹಿ ಸುದ್ದಿಯೊಂದನ್ನು ನೀಡಿದೆ. ಸಿ ಮತ್ತು ಡಿ ಗ್ರೂಪ್ ನೌಕರರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲು ಮುಂದಾಗಿದ್ದು, ಜನವರಿ 28 ರಂದು 100 ಮಂದಿ ನೌಕರರ ಮೊದಲ ತಂಡ ಪ್ರಯಾಣ ಆರಂಭಿಸಲಿದೆ.

ಈ ವಿದೇಶ ಪ್ರವಾಸ ಭಾಗ್ಯ ಹಿರಿಯ ಅಧಿಕಾರಿಗಳಿಗಲ್ಲ. ಬದಲಾಗಿ ಗ್ಯಾಂಗ್ಮನ್, ಟ್ರಾಕ್ ಮನ್ ಹಾಗೂ ನಾನ್ ಗೆಜೆಟೆಡ್ ಹುದ್ದೆಯ ಸಿಬ್ಬಂದಿಗೆ ಎಂಬುದು ಗಮನಾರ್ಹ. ವಿದೇಶ ಪ್ರವಾಸದ ಶೇ.25 ರಷ್ಟು ವೆಚ್ಚವನ್ನು ನೌಕರರು ಭರಿಸಲಿದ್ದು, ಶೇ.75 ರಷ್ಟು ವೆಚ್ಚವನ್ನು ರೈಲ್ವೇಯ ಎಸ್.ಬಿ.ಎಫ್. ನಿಧಿಯಿಂದ ಭರಿಸಲಾಗುತ್ತಿದೆ.

ಕಳೆದ ವರ್ಷದ ಡಿಸೆಂಬರ್ ನಲ್ಲಿ ನೌಕರರಿಗೆ ವಿದೇಶ ಪ್ರವಾಸದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಂಗೀಕಾರ ದೊರೆತ ಬಳಿಕ 100 ಮಂದಿ ನೌಕರರ ಮೊದಲ ತಂಡ ಜನವರಿ 28 ರಿಂದ ಆರು ದಿನಗಳ ಕಾಲ ಸಿಂಗಾಪುರ್ ಹಾಗೂ ಮಲೇಶಿಯಾಕ್ಕೆ ಭೇಟಿ ನೀಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...