alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲಿ ಪ್ರಯಾಣಿಸ್ತೀರಾ? ಹಾಗಿದ್ರೆ ಈ ಸುದ್ದಿ ಓದಿ

ಪ್ರಯಾಣಿಕರಿಗೆ ಸುಲಭ ಮಾಹಿತಿಯನ್ನು ನೀಡುವ ಸಲುವಾಗಿ ಭಾರತೀಯ ರೈಲ್ವೆ ಇಲಾಖೆ ವಾಟ್ಸಾಪ್ ಸೇವೆಯನ್ನ ಆರಂಭಗೊಳಿಸಿದೆ. ಜನ ಸಾಮಾನ್ಯರಿಗೆ ರೈಲು ಪ್ರಯಾಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ನೀಡುವ ಸಲುವಾಗಿ ಮೇಕ್ ಮೈ ಟ್ರಿಪ್ ಸಹಯೋಗದೊಂದೊಗೆ ವಾಟ್ಸಾಪ್ ಸೇವೆಗೆ ಚಾಲನೆ ನೀಡಿದೆ.

ಇದರಿಂದ ಟಿಕೆಟ್ ಬುಕ್ಕಿಂಗ್, ರೈಲಿನ ಟೈಮಿಂಗ್, ಬುಕ್ಕಿಂಗ್ ಸ್ಟೇಟಸ್, ಟಿಕೆಟ್ ಕ್ಯಾನ್ಸಲ್ ಸೇವೆ, ಫ್ಲಾಟ್ಫಾರ್ಮ್ ವಿವರಗಳನ್ನ ಪ್ರಯಾಣಿಕರು ವಾಟ್ಸಾಪ್ ಮೂಲಕವೇ ಪಡೆಯಬಹುದಾಗಿದೆ. ಜಸ್ಟ್ ಒಂದು ರಿಕ್ವೆಸ್ಟ್ ಕಳಿಸುವ ಮೂಲಕ ಪ್ರಯಾಣಿಕರು ರೈಲು ಪ್ರಯಾಣದ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

ಈ ಮೊದಲು ಪ್ರಯಾಣಿಕರು ಮಾಹಿತಿಗಾಗಿ 139 ನಂಬರ್ ಗೆ ಕರೆ ಮಾಡಬೇಕಿತ್ತು. ಈಗ ಅದರ ಬದಲು ರೈಲ್ವೆ ಇಲಾಖೆಯ ವಾಟ್ಸಾಪ್ ನಂಬರ್ 7349389104 ನಂಬರ್ ಗೆ ರೈಲು ಪ್ರಯಾಣದ ಬಗ್ಗೆ ಬೇಕಾದ ಮಾಹಿತಿಯನ್ನು ಟೈಪ್ ಮಾಡಿ ಕಳಿಸಬೇಕು. ರೈಲ್ವೆ ಇಲಾಖೆಯ ವಾಟ್ಸಾಪ್ ಸೇವೆಯ ಸರ್ವರ್ ಬ್ಯುಸಿ ಇಲ್ಲದ ಪಕ್ಷದಲ್ಲಿ ಕೇವಲ 10 ಸೆಕೆಂಡ್ ಗಳ ಒಳಗೆ ನೀವು ಕಳಿಸಿದ ಸಂದೇಶ, ವಾಟ್ಸಾಪ್ ತಲುಪಿದೆ ಅನ್ನೋದಕ್ಕೆ ಎರಡು ನೀಲಿ ಟಿಕ್ ಮಾರ್ಕ್ ಗಳ ಸಂಕೇತ ನಿಮಗೆ ಬರುತ್ತದೆ.

ಇನ್ನೂ ಹೆಚ್ಚಿನ ಮಾಹಿತಿ ಬೇಕಂದ್ರೆ ರೈಲು ನಂಬರನ್ನು ವಾಟ್ಸಾಪ್ ಗೆ ಕಳುಹಿಸಿ ನಂತರದಲ್ಲಿ ತಮಗೆ ಬೇಕಾದ ಮಾಹಿತಿ ಪಡೆಯಬಹುದಾಗಿದೆ. ಇದರ ಹೊರತಾಗಿ ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕವೂ ಪ್ರಯಾಣಿಕರು ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...