alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಉಚಿತವಾಗಿ ರೈಲು ಪ್ರಯಾಣ ಬೆಳೆಸುವ ಅವಕಾಶ

ಐಆರ್ ಸಿಟಿಸಿ ಮೂಲಕ ಟ್ರೈನ್ ಟಿಕೆಟ್ ಬುಕ್ ಮಾಡುವವರು ನೀವಾಗಿದ್ದರೆ ಒಮ್ಮೆ ನಿಮ್ಮ ಅದೃಷ್ಟ ಪರೀಕ್ಷೆ ಮಾಡಿ. ಅದೃಷ್ಟ ಚೆನ್ನಾಗಿದ್ದರೆ ಉಚಿತವಾಗಿ ರೈಲಿನಲ್ಲಿ ಪ್ರಯಾಣ ಬೆಳೆಸುವ ಅವಕಾಶ ನಿಮ್ಮದಾಗಬಹುದು. ಯಸ್ ಐಆರ್ ಸಿಟಿಸಿ ಭೀಮ್ ಮತ್ತು ಯುಪಿಐ ಆ್ಯಪ್ ಮೂಲಕ ಆನ್ಲೈನ್ ಪೇಮೆಂಟ್ ಮಾಡುವವರಿಗಾಗಿ ಹೊಸ ಸ್ಕೀಮ್ ಜಾರಿಗೆ ತಂದಿದೆ.

ಈ ಸ್ಕೀಮ್ ನಲ್ಲಿ ಪ್ರತಿ ತಿಂಗಳು ಲಕ್ಕಿ ಡ್ರಾ ನಡೆಯಲಿದೆ. ಇದ್ರಲ್ಲಿ ಐದು ಮಂದಿಯನ್ನು ವಿಜೇತರೆಂದು ಆಯ್ಕೆ ಮಾಡಲಾಗುವುದು. ಅವರಿಗೆ ಟಿಕೆಟ್ ನ ಪೂರ್ತಿ ಹಣ ವಾಪಸ್ ಸಿಗಲಿದೆ. ಭೀಮ್ ಹಾಗೂ ಯುಪಿಐ ಮೂಲಕ ಪೇಮೆಂಟ್ ಮಾಡುವವರಿಗೆ ಮಾತ್ರ ಈ ಸ್ಕೀಮ್ ನ ಲಾಭ ಸಿಗಲಿದೆ.

6 ತಿಂಗಳವರೆಗೆ ಈ ಸ್ಕೀಮ್ ಮಾನ್ಯವಾಗಲಿದೆ. ಪ್ರತಿ ತಿಂಗಳ ಮೊದಲ ವಾರ ಲಕ್ಕಿ ಡ್ರಾ ಆಯ್ಕೆ ನಡೆಯಲಿದೆ. ಆ ತಿಂಗಳಿನಲ್ಲಿ ಟಿಕೆಟ್ ಬುಕ್ ಮಾಡಿದ ಐದು ಮಂದಿಗೆ ಹಣ ವಾಪಸ್ ಸಿಗಲಿದೆ. ಆದ್ರೆ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ ಪ್ರಯಾಣಿಕರಿಗೆ ಹಾಗೂ ಟಿಡಿಆರ್ ದಾಖಲಿಸಿದ ಪ್ರಯಾಣಿಕರಿಗೆ ಈ ಲಕ್ಕಿ ಡ್ರಾನಲ್ಲಿ ಸ್ಥಾನ ಸಿಗೋದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...