alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲಾಸ್ಟಿಕ್ ಬಾಟಲ್ ಕ್ರಶರ್ ಮಶಿನ್ ಗೆ ಹಾಕಿದ್ರೆ ರೈಲ್ವೆ ಇಲಾಖೆ ನೀಡುತ್ತೆ ಹಣ

ಪ್ಲಾಸ್ಟಿಕ್ ನಿಂದ ಹೆಚ್ಚಾಗ್ತಿರುವ ಮಾಲಿನ್ಯ ತಡೆಗೆ ರೈಲ್ವೆ ಇಲಾಖೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರ್ತಿದೆ. ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಶತಾಬ್ಧಿ ಹಾಗೂ ಕೆಲ ರೈಲುಗಳಲ್ಲಿ ಪ್ಲಾಸ್ಟಿಕ್ ಪ್ಲೇಟ್ ಗಳನ್ನು ಬ್ಯಾನ್ ಮಾಡಲಾಗಿದೆ. ಈಗ ರೈಲ್ವೆ ಇಲಾಖೆ ಇನ್ನೊಂದು ಯೋಜನೆ ಜಾರಿಗೆ ತಂದಿದೆ.

ಪರಿಸರ ರಕ್ಷಣೆಗೆ ಮುಂದಾಗಿರುವ ರೈಲ್ವೆ ಇಲಾಖೆ ನೀರಿನ ಖಾಲಿ ಬಾಟಲ್ ನೀಡಿದ್ರೆ 5 ರೂಪಾಯಿ ಕ್ಯಾಶ್ಬ್ಯಾಕ್ ನೀಡಲಿದೆ. ಯಸ್, ಇದ್ರಿಂದ ಪ್ರಯಾಣಿಕರಿಗೆ ಆರ್ಥಿಕವಾಗಿ ಪ್ರಯೋಜನವಾಗಲಿದೆ. ಜೊತೆಗೆ ಪರಿಸರ ರಕ್ಷಣೆಯಾಗಲಿದೆ.

ಹೊಸ ಯೋಜನೆಯಡಿಯಲ್ಲಿ ವಡೋದರಾ ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಶ್ ಮಶಿನ್ ಅಳವಡಿಸಲಾಗಿದೆ. ಬಾಟಲ್ ಕ್ರಶ್ ಮಾಡಲು ಪ್ರಯಾಣಿಕರನ್ನು ಪ್ರೋತ್ಸಾಹಿಸಲು ಮುಂದಾಗಿರುವ ರೈಲ್ವೆ ಇಲಾಖೆ ಒಂದು ಬಾಟಲ್ ಕ್ರಶರ್ ಗೆ 5 ರೂಪಾಯಿ ನೀಡ್ತಿದೆ. ಶೀಘ್ರದಲ್ಲಿಯೇ ಇನ್ನೂ ಕೆಲ ರೈಲ್ವೆ ನಿಲ್ದಾಣಗಳಲ್ಲಿ ಕ್ರಶರ್ ಮಶಿನ್ ಅಳವಡಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸುತ್ತಿದೆ.

ಖಾಲಿ ಬಾಟಲಿಯನ್ನು ಮಶಿನ್ ಗೆ ಹಾಕುವ ಮುನ್ನ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತ್ರ ಬಾಟಲ್ ಕ್ರಶ್ ಮಾಡಬೇಕು. ನಂತ್ರ ಪೇಟಿಎಂ ವ್ಯಾಲಟ್ ಮೂಲಕ ನಿಮಗೆ 5 ರೂಪಾಯಿ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...