alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಯಾಯ್ತು ಸ್ವಚ್ಚ ರೈಲು ನಿಲ್ದಾಣಗಳ ಪಟ್ಟಿ

ಜೋಧ್ಪುರ್ ಹಾಗೂ ರಾಜಸ್ಥಾನದ ಮಾರ್ವಾರ್ ರೈಲು ನಿಲ್ದಾಣಗಳು ಸ್ವಚ್ಛವಾದ ನಿಲ್ದಾಣಗಳು ಎಂದು ಗುರುತಿಸಲಾಗಿದೆ. ಈ ಬಗ್ಗೆ ರೈಲ್ವೆ ಇಲಾಖೆ ರ್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ್ದು, ಪ್ರಧಾನಿ ಮೋದಿ ಕ್ಷೇತ್ರ ವಾರಣಾಸಿ ಶ್ರೇಯಾಂಕದಲ್ಲಿ ಕುಸಿತ ಕಂಡಿದೆ.

ರೈಲ್ವೆ ಸಚಿವ ಪಿಯುಷ್ ಗೋಯಲ್ ಸ್ವಚ್ಛವಾದ ನಿಲ್ದಾಣಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ರು. ಎ 1 ಹಾಗೂ ಎ ವರ್ಗಗಳ 400 ರೃಲ್ವೆ ನಿಲ್ದಾಣಗಳ ನೂತನ ರ್ಯಾಂಕಿಂಗ್ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಉಳಿದಂತೆ ಉತ್ತರ ಪ್ರದೇಶ ಹಾಗೂ ಬಿಹಾರ್ ರಾಜ್ಯಗಳು ಶ್ರೇಯಾಂಕದಲ್ಲಿ ಹಿನ್ನಡೆ ಅನುಭವಿಸಿವೆ.

ಪ್ರಧಾನಿ ನರೇಂದ್ರ ಮೋದಿ ಕ್ಷೇತ್ರ ವಾರಣಾಸಿ 2017ರಲ್ಲಿ ಸ್ವಚ್ಛತೆಯ ಪಟ್ಟಿಯಲ್ಲಿ 14ನೇ ಸ್ಥಾನದಲ್ಲಿತ್ತು. ಆದ್ರೆ ಈ ಬಾರಿ ವಾರಣಾಸಿ 69ನೇ ಸ್ಥಾನದಲ್ಲಿದೆ.

ಎ 1 ವರ್ಗದಲ್ಲಿ ಜೋದ್ಪುರ್ ಮೊದಲ ಸ್ಥಾನ ಪಡೆದ್ರೆ, ಜೈಪುರ್, ತಿರುಪತಿ, ವಿಜಯವಾಡ ಕ್ರಮವಾಗಿ ನಂತರದ ಸ್ಥಾನದಲ್ಲಿವೆ. ಎ ವರ್ಗದ ರೈಲ್ವೆ ನಿಲ್ದಾಣದಲ್ಲಿ ಮಾರ್ವಾರ ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಪಟ್ಟಿಯಲ್ಲಿ ರಾಜ್ಯದ ಮೈಸೂರು ರೈಲ್ವೆ ನಿಲ್ದಾಣಕ್ಕೂ ಸ್ಥಾನ ಲಭಿಸಿದ್ದು, 9ನೇ ಸ್ಥಾನದಲ್ಲಿ ಸಾಂಸ್ಕೃತಿಕ ನಗರಿ ರಾರಾಜಿಸುತ್ತಿದೆ.

ನೂತನ ಶ್ರೇಯಾಂಕ ಪಟ್ಟಿಯಲ್ಲಿ ರಾಜಸ್ಥಾನದ 2 ನಿಲ್ದಾಣಗಳು ಮುಂಚೂಣಿಯಲ್ಲಿವೆ. ಕಳೆದ ವರ್ಷ ನಡೆದಿದ್ದ ರೈಲು ನಿಲ್ದಾಣಗಳ ಸ್ವಚ್ಛತಾ ಸರ್ವೆಯಲ್ಲಿ ಜೋದ್ಪುರ್ 17 ಹಾಗೂ ಜೈಪುರ್ 8ನೇ ಸ್ಥಾನದಲ್ಲಿದ್ದವು.

ಉಳಿದಂತೆ ರಾಷ್ಟ್ರ ರಾಜಧಾನಿಯ ರೈಲ್ವೆ ನಿಲ್ದಾಣಗಳು ಕಳೆದ ಬಾರಿಗಿಂತಲೂ ಶ್ರೇಯಾಂಕದಲ್ಲಿ ಹಿನ್ನಡೆ ಅನುಭವಿಸಿವೆ. ರೈಲ್ವೆ ನಿಲ್ದಾಣಗಳಲ್ಲಿನ ಶೌಚಾಲಯದ ಶುಚಿತ್ವ, ಪ್ಲಾಟ್ ಫಾರ್ಮ್ ಹಾಗೂ ಟ್ರ್ಯಾಕ್ ಗಳ ಶುಚಿತ್ವದ ಆಧಾರದ ಮೇಲೆ ಶ್ರೇಯಾಂಕವನ್ನು ನಿಗದಿಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...