alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲಿನಲ್ಲಿ ಆಹಾರ ಆರ್ಡರ್ ಮಾಡುವ ಮುನ್ನ ಎಂ.ಆರ್.ಪಿ. ಹೀಗೆ ಚೆಕ್ ಮಾಡಿ

ರೈಲಿನ ಕ್ಯಾಟರರ್ ಹೆಚ್ಚು ಹಣ ಪಡೆಯುತ್ತಾರೆಂಬ ಚಿಂತೆ ನಿಮಗೂ ಇದ್ಯಾ. ಇನ್ಮುಂದೆ ಈ ಚಿಂತೆ ಬಿಟ್ಬಿಡಿ. ಐ.ಆರ್.ಸಿ.ಟಿ.ಸಿ. ಪ್ರಯಾಣಿಕರಿಗಾಗಿ ಹೊಸ ಆ್ಯಪ್ ಒಂದನ್ನು ಬಿಡುಗಡೆ ಮಾಡಿದೆ. ಈ ಆ್ಯಪ್ ನ ಹೆಸರು Menu On Rail.

ಐ.ಆರ್.ಸಿ.ಟಿ.ಸಿ. ಜಾರಿಗೆ ತಂದಿರುವ ಈ ಆ್ಯಪ್ ಮೂಲಕ ರೈಲಿನಲ್ಲಿ ಸಿಗುವ ತಿಂಡಿಯ ಗರಿಷ್ಠ ಚಿಲ್ಲರೆ ಬೆಲೆಯನ್ನು ಪತ್ತೆ ಹಚ್ಚಬಹುದು. Menu On Rail ಆ್ಯಪನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಬಿಡುಗಡೆ ಮಾಡಿದ್ದಾರೆ. ಪ್ರಯಾಣಿಕರಿಗೆ ಬೇರೆ ಬೇರೆ ರೈಲು ಹಾಗೂ ನಿಲ್ದಾಣದಲ್ಲಿ ಯಾವ ಆಹಾರದ ಬೆಲೆ ಎಷ್ಟಿದೆ ಎಂಬುದನ್ನು ಇದ್ರಿಂದ ಸುಲಭವಾಗಿ ತಿಳಿಯಬಹುದಾಗಿದೆ. ಕ್ಯಾಟರರ್ ಅಕ್ರಮ ತಡೆಯಲು ಇದು ನೆರವಾಗಲಿದೆ.

ಈ ಆ್ಯಪ್ ನಲ್ಲಿ ಟೀ, ಕಾಫಿ, ಪ್ಯಾಕೆಟ್ ನೀರು, ಥಾಲಿ ಸೇರಿದಂತೆ ಎಲ್ಲ ಆಹಾರಗಳ ಬೆಲೆಯಿದೆ. ರಾಜಧಾನಿ ಎಕ್ಸ್ಪ್ರೆಸ್, ಶತಾಬ್ದಿ, ದುರಂತೊ, ಗತಿಮಾನ್ ಎಕ್ಸ್ಪ್ರೆಸ್ ಮತ್ತು ತೇಜಸ್ ಎಕ್ಸ್ಪ್ರೆಸ್ ರೈಲಿನ ಮೆನು ಈ ಆ್ಯಪ್ ನಲ್ಲಿ ಲಭ್ಯವಿದೆ. ಯಾವ ಕ್ಲಾಸ್ ಪ್ರಯಾಣಿಕರಿಗೆ ಯಾವ ದರ ಎಂಬ ವಿವರ ಕೂಡ ಇದ್ರಲ್ಲಿದೆ. ಆಹಾರದ ದರ ಹಾಗೂ ತೆರಿಗೆ ಎಲ್ಲದರ ವಿವರ ಈ ಆ್ಯಪ್ ನಲ್ಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...