alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಭಿಣಿ ಧೈರ್ಯ, ರಕ್ಷಿಸಿದ ಸೇನೆಗೆ ಹೇಳಲೇ ಬೇಕು ಸಲಾಂ

ಕೇರಳ ರಾಜ್ಯ ಪ್ರವಾಹಕ್ಕೆ ತತ್ತರಿಸಿ ಹೋಗಿದೆ. ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆ ಕಾರ್ಯ ಮುಂದುವರೆದಿದೆ. ಈ ಮಧ್ಯೆ ಭಾರತೀಯ ನೌಕಾಪಡೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ನೌಕಾಪಡೆ ಹೆಲಿಕಾಪ್ಟರ್ ಮೂಲಕ ಗರ್ಭಿಣಿಯನ್ನು ರಕ್ಷಿಸುತ್ತಿದೆ.

ಗರ್ಭಿಣಿಗೆ ಸುರಕ್ಷಿತವಾಗಿ ಹೆರಿಗೆ ನಡೆದಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳಂತೆ. ಮಗು ಹಾಗೂ ತಾಯಿ ಇಬ್ಬರೂ ಸುರಕ್ಷಿತವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಮಾಹಿತಿ ಪ್ರಕಾರ ಗರ್ಭಿಣಿ ರಕ್ಷಣೆಗೆ ವೈದ್ಯರನ್ನು ಕೆಳಗೆ ಇಳಿಸಲಾಗಿತ್ತಂತೆ. ಹೆಲಿಕಾಪ್ಟರ್ ನಿಂದ ಹಗ್ಗವನ್ನು ಕೆಳಗೆ ಬಿಡಲಾಗಿದೆ. ಹಗ್ಗವನ್ನು ಗರ್ಭಿಣಿ ಸೊಂಟಕ್ಕೆ ಕಟ್ಟಿ ನಿಧಾನವಾಗಿ ಮೇಲೆತ್ತಲಾಗ್ತಿದೆ. ಈ ವೇಳೆ ಮಹಿಳೆ ಗರ್ಭದಲ್ಲಿದ್ದ ನೀರು ಸೋರಿಕೆಯಾಗಿತ್ತಂತೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸುರಕ್ಷಿತ ಹೆರಿಗೆ ನಡೆದಿದೆ.

ಕೇರಳದಲ್ಲಿ ಆಪರೇಷನ್ ಸಹಾಯ ನಡೆಯುತ್ತಿದೆ. ನೌಕಾಪಡೆ, ವಾಯುಪಡೆ, ಭೂಸೇನೆ, ಕೋಸ್ಟ್ ಗಾರ್ಡ್ ಮತ್ತು ಎನ್ಡಿಆರ್ಎಫ್ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಸುತ್ತಿವೆ. ಈವರೆಗೆ 167 ಮಂದಿ ಸಾವನ್ನಪ್ಪಿದ್ದು 8 ಸಾವಿರ ಕೋಟಿಗೂ ಹೆಚ್ಚು ನಷ್ಟವುಂಟಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...