alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್

ವಾಟ್ಸಾಪ್ ಅಪ್ಲಿಕೇಷನ್ ನಿಂದ ಆಗುತ್ತಿರುವ ಅವಘಡ ತಡೆಗಟ್ಟಲು ಕಠಿಣ ನಿರ್ಧಾರ ತೆಗೆದುಕೊಳ್ಳಲು ಭಾರತ ಸರ್ಕಾರ ಮುಂದಾಗಿದ್ದು, ಅಗತ್ಯ ಸಹಕಾರ ನೀಡದಿದ್ದರೆ ವಾಟ್ಸಾಪ್ ಅನ್ನು ಭಾರತದಲ್ಲಿ ನಿಯಂತ್ರಿಸುವ ಬಗ್ಗೆಯೂ ಚಿಂತನೆ ನಡೆಸಿದೆ.

ಫೇಕ್ ನ್ಯೂಸ್ ಹರಿದಾಟ ಹಾಗೂ ವಂಚನೆ ತಡೆಯುವ ಉದ್ದೇಶದಿಂದ ಭಾರತ ಸರ್ಕಾರ ಮತ್ತು ವಾಟ್ಸಾಪ್ ನಡುವೆ ಚರ್ಚೆಗಳು ನಡೆದಿವೆ. ವಾಟ್ಸಾಪ್ ಕಡೆಯಿಂದ ಧನಾತ್ಮಕ ಪ್ರತಿಕ್ರಿಯೆ ಸಿಗದ ಪರಿಣಾಮ ಪ್ರಕರಣ ಜಟಿಲಗೊಂಡಿದೆ ಎನ್ನಲಾಗಿದೆ.

ದಂಗೆ, ಹಿಂಸಾಚಾರ ಪ್ರಕರಣಗಳಲ್ಲಿ ಸಂದೇಶದ ಮೂಲ ಪತ್ತೆ ಹಚ್ಚಲು ಸಹಕರಿಸುವಂತೆ ಸರ್ಕಾರ ವಾಟ್ಸಾಪ್ ಕಂಪೆನಿಯನ್ನು ಕೇಳಿತ್ತು. ಆದರೆ, ವಾಟ್ಸಾಪ್ ಸಹಕರಿಸಲು ನಿರಾಕರಿಸಿತ್ತು. ಗೌಪ್ಯತೆ ಮತ್ತು ಶಿಷ್ಟಾಚಾರದ ನೆಪವೊಡ್ಡಿ ಸಹಕಾರ ಸಾಧ್ಯವಿಲ್ಲ ಎಂದು ಹೇಳಿತು. ಅಷ್ಟೇ ಅಲ್ಲದೆ ಆರಂಭದಿಂದ ಅಂತ್ಯದವರೆಗೆ ಗೂಢಲಿಪೀಕರಣ ವ್ಯವಸ್ಥೆಯ ಕಾರಣ ಇಡೀ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ.

ಈ ಉತ್ತರಕ್ಕೆ ಕೇಂದ್ರದ ಐಟಿ ಮತ್ತು ಎಲೆಕ್ಟ್ರಾನಿಕ್ ಸಚಿವಾಲಯ ಅತೃಪ್ತಿ ವ್ಯಕ್ತಪಡಿಸಿದ್ದು, ವಾಟ್ಸಾಪ್ ಗೆ ಇನ್ನೊಂದು ಅಧಿಕೃತ ಪತ್ರ ಬರೆಯಲು ನಿರ್ಧರಿಸಿದೆ. ಫೇಸ್ ಬುಕ್ ಮಾಲಿಕತ್ವದ ವಾಟ್ಸಾಪ್ಗೆ ಇದು ಮೂರನೇ ಪತ್ರವಾಗಿದ್ದು, ಒಂದು ವೇಳೆ ಸೂಕ್ತ ಸಹಕಾರ ಸಿಗದೇ ಇದ್ದರೆ ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಪರಿಣಾಮ ಎದುರಿಸುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...