alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಂಪ್ ಈ ನಿರ್ಧಾರದಿಂದ ಚೀನಾದಲ್ಲಿ ಧಮಾಲ್ ಮಾಡಲಿದೆ ಬಾಲಿವುಡ್ ಸಿನಿಮಾ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರ ಭಾರತೀಯ ಚಲನಚಿತ್ರಗಳಿಗೆ ಬಂಪರ್ ಕೊಡುಗೆಯಾಗುವ ಸಾಧ್ಯತೆಯಿದೆ. ಅಮೆರಿಕಾ-ಚೀನಾ ನಡುವಿನ ಟ್ರೇಡ್ ವಾರ್ ಭಾರತೀಯರಿಗೆ ಲಾಭವಾಗಲಿದೆ. ಎರಡೂ ದೇಶಗಳ ನಡುವೆ ಶುರುವಾಗಿರುವ ವ್ಯಾಪಾರಿ ಸಂಘರ್ಷದ ಹಿನ್ನೆಲೆಯಲ್ಲಿ ಚೀನಾ ಹಾಲಿವುಡ್ ಸಿನಿಮಾಗಳ ಮೇಲೆ ನಿಷೇಧ ಹೇರುವ ಸಾಧ್ಯತೆಯಿದೆ. ಇದು ಚೀನಾದ ವ್ಯಾಪಾರ ಹಾಗೂ ಉದ್ಯೋಗದ ಮೇಲೆ ಪರಿಣಾಮ ಬೀರಲಿದೆ. ಇದು ಭಾರತೀಯ ಸಿನಿಮಾಗಳಿಗೆ ಹೊಸ ಅವಕಾಶವಾಗಲಿದೆ.

ವ್ಯಾಪಾರಿ ಸಂಘರ್ಷ ಹಾಗೂ ಹಾಲಿವುಡ್ ಸಿನಿಮಾಗಳ ಮೇಲೆ ನಿಷೇಧ ಹೇರಿದ್ರೆ ಹಾಲಿವುಡ್ ಪ್ರೇಕ್ಷಕರು ಭಾರತೀಯ ಚಿತ್ರಗಳಿಗೆ ಆಕರ್ಷಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ಬೀಜಿಂಗ್ ನಲ್ಲಿ ಪ್ರತಿ ವರ್ಷ 34 ಹಾಲಿವುಡ್ ಚಿತ್ರಗಳು ಬಿಡುಗಡೆಯಾಗುತ್ತವೆ. ಈ ಚಿತ್ರಗಳ ಆದಾಯ ಹಿಂದಿನ ವರ್ಷ ಶೇಕಡಾ 22.3 ರಷ್ಟು ಏರಿಕೆಯಾಗಿ 8.6 ಅರಬ್ ಡಾಲರ್ ಆಗಿತ್ತು. ಭಾರತೀಯ ಚಲನಚಿತ್ರ ಉದ್ಯಮಕ್ಕೆ ಎಷ್ಟು ದೊಡ್ಡ ಅಕಾಶವಿದೆ ಎಂಬುದನ್ನು ಈ ಮೂಲಕ ನಾವು ಅರ್ಥೈಸಿಕೊಳ್ಳಬಹುದಾಗಿದೆ.

2016-2018 ರ ಮಧ್ಯೆ ಕೇವಲ 6 ಬಾಲಿವುಡ್ ಸಿನಿಮಾಗಳು ಚೀನಾದಲ್ಲಿ ಬಿಡುಗಡೆಯಾಗಿದ್ದವು. ಸಾಂಸ್ಕೃತಿಕ ಸಾಮ್ಯತೆ ಸೇರಿದಂತೆ ಚೀನಾದಲ್ಲಿ ಬಾಲಿವುಡ್ ಕಲಾವಿದರ ಅಭಿಮಾನಿಗಳ ಸಂಖ್ಯೆ ಹೆಚ್ಚಿರುವುದು ಭಾರತೀಯ ಚಲನಚಿತ್ರೋದ್ಯಮಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...