alex Certify
ಕನ್ನಡ ದುನಿಯಾ       Mobile App
       

Kannada Duniya

109 ಅಪರಾಧಿಗಳಿಗೆ ಮರಣ ದಂಡನೆ ವಿಧಿಸಿದ್ರೂ ಒಬ್ಬರೂ ಗಲ್ಲಿಗೇರಿಲ್ಲ…!

2017 ರಲ್ಲಿ ಭಾರತದಲ್ಲಿ 109 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯಾಗಿದೆ. ಆದ್ರೆ ಒಬ್ಬರನ್ನೂ ಗಲ್ಲಿಗೇರಿಸಿಲ್ಲವೆಂದು ಅಮ್ನೆಸ್ಟಿ ಇಂಟರ್ ನ್ಯಾಶನಲ್ ಮಾಹಿತಿ ನೀಡಿದೆ. 2016ರಲ್ಲಿ 136 ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.

ವಿವಿಧ ಪ್ರಕರಣಗಳಲ್ಲಿ ಇಷ್ಟು ಮಂದಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದು, ಕೊಲೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ 51 ಜನರಿಗೆ ಮರಣದಂಡನೆ ಶಿಕ್ಷೆಯಾಗಿದೆ. ಈ ಸಂಖ್ಯೆ 2016 ರಲ್ಲಿ 87ರಷ್ಟಿತ್ತು. ಲಂಡನ್ ನ ನ್ಯಾಶನಲ್ ಲಾ ಯೂನಿವರ್ಸಿಟಿಸ್ ಆನ್ ಡೆತ್ ಪೆನಾಲ್ಟಿ ಈ ಅಂಕಿ ಅಂಶಗಳನ್ನು ನೀಡಿದೆ.

ಸದ್ಯ ಭಾರತದಲ್ಲಿ ಮರಣ ದಂಡನೆ ಶಿಕ್ಷೆಗೊಳಗಾದ ಅಪರಾಧಿಗಳು 371. ಇವರನ್ನೆಲ್ಲ ಇದುವರೆಗೂ ಗಲ್ಲಿಗೇರಿಸಿಲ್ಲ. 2015ರಲ್ಲಿ ಮುಂಬೈ ದಾಳಿ ರೂವಾರಿ ಯಾಕೂಬ್ ಮೆಮೊನ್ ನನ್ನು ಗಲ್ಲಿಗೆ ಹಾಕಲಾಗಿತ್ತು. ಅದಾದ ನಂತರ ಯಾರನ್ನೂ ಗಲ್ಲಿಗೇರಿಸಿಲ್ಲ.

ಗಲ್ಲು ಶಿಕ್ಷೆಗೊಳಗಾದ ಅತಿ ಹೆಚ್ಚು ಅಪರಾಧಿಗಳಿರುವುದು ಚೀನಾದಲ್ಲಿ. ಆದ್ರೆ ನಿರ್ದಿಷ್ಟ ಸಂಖ್ಯೆ ಎಷ್ಟು ಅನ್ನೋ ಮಾಹಿತಿ ಸಿಕ್ಕಿಲ್ಲ. ನಂತರದ ಸ್ಥಾನ ಇರಾನ್ ಗೆ ದಕ್ಕಿದೆ. ಇಲ್ಲಿ 507 ಅಪರಾಧಿಗಳನ್ನು ಗಲ್ಲಿಗೇರಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...