alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ಲಾಸ್ಟಿಕ್ ಬಾಟಲಿ ನುಂಗಿ ಒದ್ದಾಡಿದ ಸರ್ಪ

cobra

ನಾಗರಹಾವು ಅಂದ್ರೆ ಎಂಥವರು ಕೂಡ ಭಯಪಡ್ತಾರೆ. ಸರ್ಪದ ಒಂದು ಹನಿ ವಿಷ ಕ್ಷಣಮಾತ್ರದಲ್ಲಿ ಮನುಷ್ಯನ ಪ್ರಾಣವನ್ನೇ ತೆಗೆಯಬಲ್ಲದು. ಆದ್ರೆ ಕೆಲವೊಮ್ಮೆ ಇಂತಹ ಭಯಾನಕ ಸರೀಸೃಪಗಳು ಕೂಡ ಸಂಕಷ್ಟಕ್ಕೆ ಸಿಲುಕುತ್ತವೆ. ಅತಿ ಆಸೆಯಿಂದ ಸಿಕ್ಕದ್ದನ್ನೆಲ್ಲ ನುಂಗಲು ಹೋಗಿ ಪಜೀತಿ ಅನುಭವಿಸುತ್ತವೆ.

ಗೋವಾದಲ್ಲಿ ನಾಗರಹಾವೊಂದು ತಂಪು ಪಾನೀಯದ ಬಾಟಲಿಯನ್ನು ನುಂಗಲು ಹೋಗಿ ಯಡವಟ್ ಮಾಡ್ಕೊಂಡಿದೆ. ಬಾಟಲಿ ಕಂಡಿದ್ದೇ ತಡ ಹಾವು ಅದನ್ನು ನುಂಗಿಬಿಟ್ಟಿದೆ. ಅದರ ಬಾಯಿಗಿಂತ್ಲೂ ಬಾಟಲಿ ದೊಡ್ಡದಾಗಿದ್ದಿದ್ರಿಂದ ಪೂರ್ತಿ ನುಂಗಲೂ ಆಗದೆ ಉಗುಳಲೂ ಆಗದೆ ಸುಮಾರು ಹೊತ್ತು ಒದ್ದಾಡಿದೆ.

ಕೊನೆಗೆ ಕಷ್ಟಪಟ್ಟು ಬಾಟಲಿಯನ್ನು ಹೊರಕ್ಕೆ ಉಗುಳಿದೆ. ಸುತ್ತ ನಿಂತು ವೀಕ್ಷಿಸ್ತಾ ಇದ್ದ ಜನರು ಅಂತೂ ಹಾವು ಪಾರಾಯ್ತು ಅಂತಾ ಸಮಾಧಾನ ಪಟ್ಟುಕೊಂಡ್ರು. ಪ್ಲಾಸ್ಟಿಕ್ ತ್ಯಾಜ್ಯ ಪ್ರಾಣಿಗಳಿಗೆ ಕೂಡ ಎಷ್ಟು ಹಾನಿಕಾರಕ ಅನ್ನೋದಕ್ಕೆ ಇದೊಂದು ಬೆಸ್ಟ್ ಎಕ್ಸಾಂಪಲ್.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...