alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಕ್ಸ್ ನಿಂದ ದುರ್ಗಂಧ ಬರುತ್ತಿದ್ದರೆ ಎಚ್ಚರ…..

ಗಬ್ಬು ವಾಸನೆ ಬರುತ್ತಿದ್ದ ಸಾಕ್ಸ್ ಧರಿಸಿ ಬಂದಿದ್ದ ಬಸ್ ಪ್ರಯಾಣಿಕನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರಿಗೆ ಉಪದ್ರವ ಕೊಡುತ್ತಿದ್ದಾನೆಂಬ ಆರೋಪದಡಿ 27 ವರ್ಷದ ಪ್ರಕಾಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಬಸ್ ನಲ್ಲಿ ಕುಳಿತಿದ್ದ ಪ್ರಕಾಶ್ ತನ್ನ ಸಾಕ್ಸ್ ಹಾಗೂ ಬೂಟನ್ನು ಬಿಚ್ಚಿದ್ದ. ಅದರಿಂದ ಬರ್ತಾ ಇದ್ದ ಗಬ್ಬು ವಾಸನೆ ಸುತ್ತ ಕುಳಿತಿದ್ದ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದೆ. ಅದನ್ನು ಬ್ಯಾಗ್ ನಲ್ಲಿಟ್ಟುಕೋ ಇಲ್ಲವೇ ಹೊರಗೆ ಬಿಸಾಡು ಅಂತಾ ಪ್ರಯಾಣಿಕರೆಲ್ಲ ಪ್ರಕಾಶ್ ಗೆ ಸೂಚಿಸಿದ್ದಾರೆ.

ಆದ್ರೆ ಅದಕ್ಕೆ ಒಪ್ಪದ ಪ್ರಕಾಶ್ ಜಗಳಕ್ಕಿಳಿದಿದ್ದಾನೆ. ಕೂಡಲೇ ಬಸ್ ಅನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯುವಂತೆ ಪ್ರಯಾಣಿಕರು ಚಾಲಕನಿಗೆ ಒತ್ತಾಯ ಮಾಡಿದ್ರು. ಪ್ರಕಾಶ್ ವಿರುದ್ಧ ಕೇಸ್ ದಾಖಲು ಮಾಡಿದ್ರು. ಪ್ರಕಾಶ್ ನನ್ನು ಬಂಧಿಸಿದ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...