alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಬಾರಿ ಭಾರತೀಯನ ಮುಡಿಗೇರಿದ ಮಿ. ವರ್ಲ್ಡ್

rohit_khandelwal_sm_fb_650_072016125740

ಹೈದ್ರಾಬಾದ್ ನ 26 ವರ್ಷದ ರೋಹಿತ್ ಖಂಡೇಲ್ವಾಲ್ ‘ಮಿಸ್ಟರ್ ವರ್ಲ್ಡ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಹಾಗೂ ಏಷ್ಯಾದ ವ್ಯಕ್ತಿ ಎನಿಸಿಕೊಂಡಿದ್ದಾರೆ ರೋಹಿತ್.

ಜುಲೈ 19ರಂದು ಸೌಥ್ ಪೋರ್ಟ್ನಲ್ಲಿ ನಡೆದ ಅಂತಿಮ ಸ್ಪರ್ಧೆಯಲ್ಲಿ 40 ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದ ರೋಹಿತ್ ಈ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಈ ಹಿಂದೆ ರೋಹಿತ್ ಕಿರು ತೆರೆಯಲ್ಲಿ ಕಾಣಿಸಿಕೊಂಡಿದ್ದರು. ಪ್ಯಾರ್ ತೂನೆ ಕ್ಯಾ ಕಿಯಾ, ಯೇ ಹೈ ಆಶಿಖಿ, ಎಂಟಿವಿ ಬಿಗ್ ಎಫ್ ನಲ್ಲಿ ಅಭಿನಯಿಸಿದ್ದರು.

ಪ್ರಶಸ್ತಿ ಪಡೆದ ನಂತ್ರ ಮಾತನಾಡಿದ ರೋಹಿತ್, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ‘ಮಿಸ್ಟರ್ ವರ್ಲ್ಡ್’ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ಇದಕ್ಕೆ ನಿಮ್ಮೆಲ್ಲರ ಆಶೀರ್ವಾದ ಕಾರಣ ಎಂದಿದ್ದಾರೆ ರೋಹಿತ್. ಇನ್ಸ್ಟ್ರಾಗ್ರಾಮ್ ನಲ್ಲಿ ರೋಹಿತ್ ತಮ್ಮ ಫೋಟೋಗಳನ್ನು ಅಪ್ ಲೋಡ್ ಮಾಡಿದ್ದು, ಖುಷಿಯನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...