alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿರೋ ನಕಲಿ ವಿಡಿಯೋ ಕುರಿತು ಸೇನೆ ಗರಂ

ಕೇರಳದಲ್ಲಿ ಸಾವಿರಾರು ಸಂತ್ರಸ್ಥರನ್ನು ರಕ್ಷಿಸಲು ಜೀವ ಪಣಕ್ಕಿಟ್ಟು ಭಾರತೀಯ ಸೇನೆ ಹೋರಾಡುತ್ತಿರುವಾಗಲೇ ಸೇನೆ ಹೆಸರಲ್ಲಿ ನಕಲಿ ವಿಡಿಯೋ ಒಂದು ಹರಿದಾಡಿದೆ.

ಈ ವಿಡಿಯೋ ಬಗ್ಗೆ ಸೇನಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲದೇ ಇಂಥ ವಿಡಿಯೋವನ್ನು ಸೇನೆ ಸೃಷ್ಟಿಸಿಲ್ಲ ಮತ್ತು ಒಂದು ವೇಳೆ ಇಂತಹ ಕೃತ್ಯ ಕಂಡು ಬಂದಲ್ಲಿ ತಕ್ಷಣವೇ ತಮ್ಮ ಗಮನಕ್ಕೆ ತರುವಂತೆ ಸಾರ್ವಜನಿಕವಾಗಿ ಟ್ವೀಟರ್ ನಲ್ಲಿ ಸಂದೇಶ ಕಳಿಸಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಸಮವಸ್ತ್ರಧಾರಿ ವ್ಯಕ್ತಿಯೊಬ್ಬ ಪ್ರವಾಹ ಪರಿಹಾರದ ಕುರಿತು ಸುಳ್ಳು ಮಾಹಿತಿ ನೀಡಿದ್ದಾನೆ. ಅಲ್ಲದೇ ಕೇರಳದಲ್ಲಿ ಶ್ರೀಮಂತರು ಮಾತ್ರ ಸಮಸ್ಯೆಗೀಡಾಗಿದ್ದು, ನೆರೆ ಪರಿಹಾರ ನೀಡದಂತೆ ಕೋರಿದ್ದಾನೆ. ಇದನ್ನು ಗಮನಿಸಿರುವ ಭಾರತೀಯ ಸೇನೆ ಟ್ವೀಟರ್ ನಲ್ಲಿ ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದು ಫೇಕ್ ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ ನೆರೆ ಪರಿಹಾರದ ಬಗ್ಗೆ ಯಾವುದಾದರೂ ಸುಳ್ಳು ಮಾಹಿತಿ ಬಂದರೆ ವಾಟ್ಸಾಪ್ ನಂಬರ್ +917290028579 ಗೆ ಕಳಿಸುವಂತೆ ಸೇನೆ ಕೋರಿದೆ.
ಪರಿಹಾರ ಕಾರ್ಯ ಚುರುಕುಗೊಂಡಿದ್ದು, ನಿರಂತರ ಕಾರ್ಯಾಚರಣೆ ನಡೆಸಿ ಸಾವಿರಾರು ಜನರನ್ನು ರಕ್ಷಿಸಲಾಗಿದೆ. ಮಳೆ ಕಡಿಮೆಯಾಗಿರುವ ಕಾರಣ ಕೆಲವು ಜಿಲ್ಲೆಗಳಲ್ಲಿ ಘೋಷಿಸಿದ್ದ ರೆಡ್ ಅಲರ್ಟ್ ಎಚ್ಚರಿಕೆ ಹಿಂಪಡೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...