alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳದಲ್ಲಿ ಯೋಧರು ಮಾಡ್ತಿರೋ ಕೆಲಸಕ್ಕೆ ಹೇಳಲೇಬೇಕು ಹ್ಯಾಟ್ಸಾಫ್

ದೇವರ ನಾಡು ಕೇರಳ ಪ್ರವಾಹದ ಭೀತಿಗೆ ಸಾಕಷ್ಟು ನಲುಗಿಹೋಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಯೋಧರು ಈಗ ಪ್ರವಾಹ ಪೀಡಿತರ ರಕ್ಷಣಾ ಕಾರ್ಯಕ್ಕೆ ಇಳಿದಿದ್ದಾರೆ. ಆಪರೇಷನ್ ಸಹಯೋಗ್ ಹೆಸರಿನಲ್ಲಿ ರಕ್ಷಣಾ ಕಾರ್ಯವನ್ನು ಶುರುಮಾಡಿರುವ ಯೋಧರು ಜನರನ್ನ ಸುರಕ್ಷಿತ ಸ್ಥಳಕ್ಕೆ ಮರಳಿಸುವಲ್ಲಿ ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ.

ಮಣಪ್ಪುರಂ ಬಳಿ ರಸ್ತೆಗೆ ರಸ್ತೆಯೇ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ಇದರಿಂದ ಜನರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸೋದಕ್ಕಾಗಿ ಯೋಧರು ಮಳೆಯಿಂದಾಗಿ ಧರೆಗುರುಳಿದ ಮರಗಳನ್ನ ಬಳಸಿ ಸೇತುವೆ ಕಟ್ಟಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಮಳೆಯಿಂದ ಭೂಮಿಗೆ ಬಿದ್ದಂತಾ ಮರಗಳಿಂದ 40 ಅಡಿ ಉದ್ದದ ಸೇತುವೆಯನ್ನು ನಿರ್ಮಿಸಿದ್ದಾರೆ. ಯೋಧರ ಸೇತುವೆ ನಿರ್ಮಾಣ ಕಾರ್ಯವೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗ್ತಿದೆ.

ಭಾರತೀಯ ಸೇನೆಯ ಎಂಜಿನಿಯರಿಂಗ್ ಟಾಸ್ಕ್ ಫೋರ್ಸ್ ಸ್ಥಳೀಯರ ಸಹಾಯದೊಂದಿಗೆ ಸೇತುವೆಯನ್ನ ನಿರ್ಮಿಸಿದೆ. ಯೋಧರು ಕೆಲವೇ ನಿಮಿಷಗಳಲ್ಲಿ ಸೇತುವೆ ನಿರ್ಮಿಸಿದ ಪರಿ ನೋಡಿ ಸ್ಥಳೀಯರು ಆಶ್ಚರ್ಯ ಚಕಿತರಾಗಿದ್ದಾರೆ.

ಸುಮಾರು 800 ಮಂದಿಯನ್ನು ಈ ಸೇತುವೆ ಮೂಲಕ ಸುರಕ್ಷಿತ ಪ್ರದೇಶಕ್ಕೆ ಯೋಧರು ಸ್ಥಳಾಂತರ ಮಾಡಿದ್ದಾರೆ. ಭಾರತೀಯ ಯೋಧರು ಮಾತ್ರವಲ್ಲ, ನೌಕಾದಳ ಮತ್ತು ವಾಯುಸೇನೆ, ಎನ್ಡಿಆರ್ಎಫ್ ತಂಡಗಳು ಕೂಡ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...