alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಗಿ ಮಾರಾಟವಾಗುತ್ತಿದೆ ಸೇನಾ ಸಮವಸ್ತ್ರ

2016 ರಲ್ಲಿ ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ಸೇನಾ ಸಮವಸ್ತ್ರ ಧರಿಸಿ ಬಂದಿದ್ದ ಭಯೋತ್ಪಾದಕರು ಸೇನಾ ನೆಲೆ ಮೇಲೆ ದಾಳಿ ಮಾಡಿದ ಪ್ರಕರಣದ ಬಳಿಕ ಸೇನಾ ಸಮವಸ್ತ್ರ ಮಾರಾಟಕ್ಕೆ ಕೆಲವೊಂದು ನಿಯಮಗಳನ್ನು ವಿಧಿಸಲಾಗಿತ್ತು. ಆದರೆ ರಾಜಸ್ಥಾನ ಗಡಿ ಭಾಗದ ನಗರಗಳಲ್ಲಿ ಪರವಾನಿಗೆ ಪಡೆಯದೆ ಕೆಲವೊಂದು ಅಂಗಡಿಗಳಲ್ಲಿ ಬಹಿರಂಗವಾಗಿ ಸೇನಾ ಸಮವಸ್ತ್ರ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

500 ರೂ. ನಿಂದ 1000 ರೂ. ಗಳವರೆಗೆ ಸೇನಾ ಸಮವಸ್ತ್ರವನ್ನು ಮಾರಾಟ ಮಾಡಲಾಗುತ್ತಿದ್ದು, ಇದರ ಜೊತೆಗೆ ಸೇನಾಧಿಕಾರಿಗಳು ಬಳಸುವ ಬೂಟ್ಸ್, ಜಾಕೇಟ್, ಬೆಲ್ಟ್, ಬೆಡ್ ರೋಲ್ಸ್ ಗಳೂ ಇಲ್ಲಿ ಲಭ್ಯವಿವೆ. ಅಂಗಡಿಗಳ ಮುಂದೆ ಬಹಿರಂಗವಾಗಿ ಸೇನಾ ಸಮವಸ್ತ್ರಗಳನ್ನು ನೇತು ಹಾಕಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.

ಪಠಾಣ್ ಕೋಟ್ ದಾಳಿ ಬಳಿಕ ಪಂಜಾಬ್ ಸರ್ಕಾರ, ಸೇನಾ ಸಮವಸ್ತ್ರ ಮಾರಾಟ ಮಾಡುವುದಕ್ಕೆ ಹಲವು ನಿರ್ಬಂಧಗಳನ್ನು ಹೇರಿತ್ತು. ಇಂತಹ ಸಮವಸ್ತ್ರ ಖರೀದಿಸಲು ಬರುವವರ ಗುರುತಿನ ಪತ್ರ ಪಡೆಯುವುದರ ಜೊತೆಗೆ ವಿಳಾಸ, ಫೋನ್ ನಂಬರ್ ಪಡೆಯುವುದನ್ನು ಕಡ್ಡಾಯ ಮಾಡಲಾಗಿತ್ತು. ಆದರೆ ರಾಜಸ್ಥಾನದ ಗಡಿ ಭಾಗದಲ್ಲಿ ಮಾತ್ರ ಯಾವುದೇ ನಿಯಮ ಪಾಲಿಸದೆ ಸಮವಸ್ತ್ರಗಳನ್ನು ಮಾರಾಟ ಮಾಡಲಾಗುತ್ತಿದೆ. ಮಾಧ್ಯಮಗಳಲ್ಲಿ ಈ ವಿಚಾರ ವರದಿಯಾಗುತ್ತಿದ್ದಂತೆಯೇ ಇಂತವರ ವಿರುದ್ದ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...