alex Certify
ಕನ್ನಡ ದುನಿಯಾ       Mobile App
       

Kannada Duniya

ಸೇನೆಯಿಂದ ಹೊರಬೀಳಲಿದ್ದಾರೆ 1,50,000 ಸಿಬ್ಬಂದಿ

ಮುಂಬರುವ ಮೂರ್ನಾಲ್ಕು ವರ್ಷಗಳಲ್ಲಿ ಭಾರತೀಯ ಸೇನೆಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಸಮೀಕ್ಷೆಯೊಂದರ ವರದಿ ನಂತ್ರ ಸೇನೆ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಹಾಗೂ ಭವಿಷ್ಯದಲ್ಲಿ ಕದನಕ್ಕೆ ಸಿದ್ಧವಾಗುವ ತೀರ್ಮಾನಕ್ಕೆ ಬಂದಿದೆ. ಮಾಧ್ಯಮಗಳ ವರದಿ ಪ್ರಕಾರ ಮುಂದಿನ ನಾಲ್ಕೈದು ವರ್ಷಗಳಲ್ಲಿ ಸೇನೆ 1,50,000 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಿದೆಯಂತೆ.

ಕಳೆದ ಒಂದು ವರ್ಷಗಳಿಂದ ಸೇನೆಯ ಆಹಾರ ಪದ್ಧತಿ ಸೇರಿದಂತೆ ಅನೇಕ ಬದಲಾವಣೆಗಳು ಕಾಣ್ತಿವೆ. ಸಮೀಕ್ಷೆಯಂತೆ  12 ಲಕ್ಷ ಬಲವುಳ್ಳ ಸೇನೆಯನ್ನು ವಿವಿಧ ಭಾಗಗಳಾಗಿ ವಿಂಗಡಿಸಲು ನಿರ್ಧರಿಸಲಾಗಿದೆ. ಲೆಫ್ಟಿನೆಂಟ್ ಜನರಲ್ ಜೆಎಸ್ ಸಿಂಧು ಅವರ ನೇತೃತ್ವದಲ್ಲಿ 11 ಸದಸ್ಯರ ಸಮಿತಿಯಿಂದ ವರದಿ ಸಿದ್ಧವಾಗ್ತಿದೆ. ಈ ತಿಂಗಳ ಅಂತ್ಯದೊಳಗೆ ಸೇನೆಯ ಪ್ರಮುಖ ಬಿಪಿನ್ ರಾವತ್ ಗೆ ನೀಡಲಿದೆ.

ಮುಂದಿನ ಎರಡು ವರ್ಷಗಳಲ್ಲಿ ವಿವಿಧ ಘಟಕಗಳಲ್ಲಿ 50,000 ಸಿಬ್ಬಂದಿ ಸೇನೆಯಿಂದ ನಿವೃತ್ತಿ ಹೊಂದಲಿದ್ದಾರೆ. 2022-23ರೊಳಗೆ ಒಂದು ಲಕ್ಷ ಸೈನಿಕರು ಸೇನೆಯಿಂದ ಹೊರಬೀಳಲಿದ್ದಾರೆಂದು ಸೇನೆ ಮುಖ್ಯಸ್ಥರೊಬ್ಬರು ಹೇಳಿದ್ದಾರೆ. ಈ ವಿಂಗಡನೆ ಕೆಳ ಮಟ್ಟದಲ್ಲಿ ಮಾತ್ರವಲ್ಲ ನಿರ್ದೇಶಕರ ಮಟ್ಟದಲ್ಲಿಯೂ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...