alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ಸೇನೆಗೆ ಆನೆ ಬಲ

ನವದೆಹಲಿ: ಭಾರತೀಯ ಸೇನೆಯನ್ನು ಪುನಾರಚನೆ ಮಾಡಲು ರಕ್ಷಣಾ ಇಲಾಖೆ ಮಹತ್ವದ ಯೋಜನೆಯನ್ನು ರೂಪಿಸಿದೆ.

57,000 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವ ಮೂಲಕ ಸುಧಾರಣೆ ತರಲು, ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ನಿವೃತ್ತ ಲೆಫ್ಟಿನೆಂಟ್ ಜನರಲ್ ಶೇಕತ್ಕರ್ ನೇತೃತ್ವದ ಸಮಿತಿಯು 99 ಶಿಫಾರಸುಗಳನ್ನು ಮಾಡಿದ್ದು, ಅದರಲ್ಲಿ 65 ಶಿಫಾರಸು ಅಂಗೀಕರಿಸಲಾಗಿದೆ.

ರಕ್ಷಣಾ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುವ ಕುರಿತಾಗಿ ವಿಸ್ತೃತ ಚರ್ಚೆ ನಡೆಸಲಾಗಿದೆ.

ಸೇನೆಯ ಎಲ್ಲಾ ಹಂತ, ವಿಭಾಗದಲ್ಲಿಯೂ ಸುಧಾರಣೆ ಕೈಗೊಳ್ಳಲಾಗುವುದು. ಭಾರತೀಯ ಸೇನೆಯ ಬಲವನ್ನು ಹೆಚ್ಚಿಸುವ ಜೊತೆಗೆ ಪುನಾರಚಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...