alex Certify
ಕನ್ನಡ ದುನಿಯಾ       Mobile App
       

Kannada Duniya

ಯೋಧರಿಗೆ ಕೊನೆಗೂ ಸಿಗ್ತಿದೆ ಅತ್ಯಾಧುನಿಕ ಹೆಲ್ಮೆಟ್

indian-army-guns_650x400_81477631547

ಇದೇ ಮೊದಲ ಭಾರಿಗೆ ಭಾರತೀಯ ಸೇನೆಯ ಎಲ್ಲಾ ಯೋಧರಿಗೆ ಅತ್ಯಾಧುನಿಕ ವಿಶ್ವದರ್ಜೆಯ ಹೆಲ್ಮೆಟ್ ಲಭ್ಯವಾಗಲಿದೆ. ಮಿಲಿಟರಿ ಕಾರ್ಯಾಚರಣೆ ವೇಳೆ ಯೋಧರ ಪ್ರಾಣ ಉಳಿಸಬಲ್ಲ ಹೆಲ್ಮೆಟ್ ಇದು. ಕಾನ್ಪುರ ಮೂಲದ ಕಂಪನಿ ‘ಎಂಕೆಯು ಇಂಡಸ್ಟ್ರೀಸ್’ ಯೋಧರಿಗಾಗಿ 1.58 ಲಕ್ಷ ಹೆಲ್ಮೆಟ್ ಗಳನ್ನು ತಯಾರಿಸಲಿದೆ.

ಇದಕ್ಕಾಗಿ ಸರ್ಕಾರದ ಜೊತೆ 170-180 ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ. 2 ದಶಕಗಳ ನಂತರ ಇದೇ ಮೊದಲ ಬಾರಿಗೆ ರಕ್ಷಣಾ ಇಲಾಖೆ, ಸೈನಿಕರಿಗೆ ಉತ್ತಮ ಗುಣಮಟ್ಟದ ಹೆಲ್ಮೆಟ್ ಗಳನ್ನು ನೀಡಲು ಮುಂದಾಗಿದೆ. ಇನ್ನು ಮೂರು ವರ್ಷಗಳೊಳಗೆ ಎಲ್ಲಾ ಸೈನಿಕರಿಗೂ ಬುಲೆಟ್ ಪ್ರೂಫ್ ಜಾಕೆಟ್ ಹಾಗೂ ಹೆಲ್ಮೆಟ್ ಅನ್ನು ಒದಗಿಸಲಾಗುತ್ತದೆ.

ಈ ಹೆಲ್ಮೆಟ್ ಧರಿಸಿದರೆ ಅತ್ಯಂತ ಹತ್ತಿರದಿಂದ 9 ಎಂಎಂ ಮದ್ದುಗುಂಡು ತಲೆಗೆ ತಗುಲಿದ್ರೂ ಯಾವುದೇ ಅಪಾಯವಿಲ್ಲ, ಬಂದೂಕಿನಿಂದ ಸಿಡಿಯುವ ಗುಂಡನ್ನು ತಡೆಯುವ ತಾಕತ್ತು ಈ ಹೆಲ್ಮೆಟ್ ಗಿದೆ. ಹೆಲ್ಮೆಟ್ ಗಳಲ್ಲಿ ಯೋಧರಿಗೆ ಸಂವಹನಕ್ಕೆ ಅನುಕೂಲವಾಗುವಂತಹ ಡಿವೈಸ್ ಗಳನ್ನು ಕೂಡ ಅಳವಡಿಸಲಾಗುತ್ತಿದೆ. ಸದ್ಯ ಯೋಧರು ಭಾರತದಲ್ಲೇ ತಯಾರಾದ ಸಾಮಾನ್ಯ ಹೆಲ್ಮೆಟ್ ಬಳಸುತ್ತಿದ್ದಾರೆ.

ಯುದ್ಧ ಸನ್ನಿವೇಶಗಳಲ್ಲಿ ಈ ಹೆಲ್ಮೆಟ್ ಗಳು ಸೈನಿಕರಿಗೆ ಸಹಕಾರಿಯಾಗುತ್ತಿಲ್ಲ, ಹಾಗಾಗಿ ಅತ್ಯಾಧುನಿಕ ಹೆಲ್ಮೆಟ್ ಹಾಗೂ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಒದಗಿಸಲಾಗ್ತಿದೆ. ಕಳೆದ ಮಾರ್ಚ್ ನಲ್ಲಿ ‘ಟಾಟಾ ಅಡ್ವಾನ್ಸ್ಡ್ ಮಟೀರಿಯಲ್ಸ್ ಲಿಮಿಟೆಡ್’ ಕಂಪನಿಯಿಂದ ಸರ್ಕಾರ 50,000 ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...