alex Certify
ಕನ್ನಡ ದುನಿಯಾ       Mobile App
       

Kannada Duniya

ವಾಯುಸೇನೆ ವಿಮಾನ ಪತನ : ಪೈಲೆಟ್ ಸಾವು

ಗುಜರಾತಿನ ಕಚ್ ನಲ್ಲಿ ಭಾರತ ವಾಯುಸೇನೆಗೆ ಸೇರಿದ್ದ ಜಾಗ್ವಾರ್ ಯುದ್ಧ ವಿಮಾನ ಪತನಗೊಂಡಿದೆ. ಘಟನೆಯಲ್ಲಿ ಪೈಲೆಟ್ ಸಾವನ್ನಪ್ಪಿದ್ದಾರೆ.

ಗುಜರಾತಿನ ಜಾಮ್ನಗರದಿಂದ ದೈನಂದಿನ ತರಬೇತಿ ಹಾರಾಟಕ್ಕೆ ತೆರಳಿದ್ದ ವೇಳೆ ದುರ್ಘಟನೆ ನಡೆದಿದೆ. ಕಚ್ ನ ಬರೋಜಾ ಗ್ರಾಮದಲ್ಲಿ ವಿಮಾನ ಪತನಗೊಂಡಿದೆ. ಘಟನೆ ನಂತ್ರ ಸ್ಥಳಕ್ಕೆ ಬಂದಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪೈಲೆಟ್ ಕಮಾಂಡೋ ಸಂಜಯ್ ಚೌಹಾಣ್ ಹುತಾತ್ಮರಾಗಿದ್ದಾರೆ. ವಾಯುಸೇನೆ ತನಿಖೆಗೆ ಆದೇಶ ನೀಡಿದೆ.

ವಿಮಾನಿನ ಅವಶೇಷಗಳು ಗ್ರಾಮದ ಕೆಲವೆಡೆ ಬಿದ್ದಿವೆ. ಘಟನೆಯಲ್ಲಿ ಕೆಲ ಜಾನುವಾರುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಜಾಮ್ನಗರ ವಾಯುಸೇನೆ ತಂಡ ಕೂಡ ಸ್ಥಳಕ್ಕೆ ಆಗಮಿಸಿದೆ. ಮುಂದ್ರಾದ ಬಳಿ ವಿಮಾನ ಸಂಪರ್ಕ ಕಳೆದುಕೊಂಡಿದೆ. ನಂತ್ರ ದುರ್ಘಟನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...