alex Certify
ಕನ್ನಡ ದುನಿಯಾ       Mobile App
       

Kannada Duniya

ಈಗ್ಲೇ ಲೋಕಸಭಾ ಚುನಾವಣೆ ನಡೆದ್ರೆ ಫಲಿತಾಂಶ ಏನಾಗುತ್ತೆ ಗೊತ್ತಾ?

ಮುಂದಿನ ವರ್ಷ 2019ರಲ್ಲಿ ಸಾರ್ವಜನಿಕ ಚುನಾವಣೆ ನಡೆಯಲಿದೆ. ಇಡೀ ವಿಶ್ವವೇ ದೇಶದ ಚುನಾವಣೆಯನ್ನು ಎದುರು ನೋಡ್ತಿದೆ. ಬಿಜೆಪಿ ಗೆಲುವು ಸಾಧಿಸಲಿದ್ಯಾ ಇಲ್ಲ ಕಾಂಗ್ರೆಸ್ ಕೈಗೆ ಅಧಿಕಾರ ಹೋಗಲಿದ್ಯಾ ಎಂಬ ಪ್ರಶ್ನೆಗೆ ಫಲಿತಾಂಶದ ನಂತ್ರವೇ ಉತ್ತರ ಸಿಗಲಿದೆ.

ಚುನಾವಣೆ ದಿನಾಂಕ ಪ್ರಕಟಕ್ಕೂ ಮುನ್ನವೇ ಅನೇಕ ಸರ್ವೆಗಳು ನಡೆಯುತ್ತಿವೆ. ಇತ್ತೀಚಿಗೆ ನಡೆದ ಸರ್ವೆಯೊಂದರ ಫಲಿತಾಂಶ ಬಿಜೆಪಿಗೆ ಆಘಾತ ಹುಟ್ಟಿಸುವಂತಿದೆ. ಈಗ್ಲೇ ಚುನಾವಣೆ ನಡೆದ್ರೆ ಬಿಜೆಪಿ ನೇರವಾಗಿ 80 ಸೀಟುಗಳನ್ನು ಕಳೆದುಕೊಳ್ಳಲಿದೆಯಂತೆ. ಬಿಜೆಪಿ ಏಕಾಂಗಿಯಾಗಿ ಕಣಕ್ಕಿಳಿದ್ರೆ ಬಹುಮತ ಕಳೆದುಕೊಳ್ಳೋದು ನಿಶ್ಚಿತವೆಂದು ಸರ್ವೆಯಲ್ಲಿ ಹೇಳಲಾಗಿದೆ.

ಕಾರ್ವಿ ಇನ್ಸೈಟ್ಸ್ ಮತ್ತು ಇಂಡಿಯಾ ಟುಡೇ ಜೊತೆಗೂಡಿ ಮಾಡಿತ್ತು. ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ ಬಹುಮತ ಸಿಗಲಿದೆ ಎಂದೂ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಸಮೀಕ್ಷೆ ವಿವರ ಹೀಗಿದೆ :

ಲೋಕಸಭೆ ಸೀಟುಗಳ ಸಂಖ್ಯೆ : 543

ಬಿಜೆಪಿ ನೇತೃತ್ವದ ಎನ್ಡಿಎಗೆ  ಶೇಕಡಾ 36ರಷ್ಟು ಮತ

ಕಾಂಗ್ರೆಸ್ ನೇತೃತ್ವದ ಯುಪಿಎಗೆ ಶೇಕಡಾ 31ರಷ್ಟು ಮತ

ಇತರ ಪಕ್ಷಗಳಿಗೆ ಶೇಕಡಾ 33ರಷ್ಟು ಮತ

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...