alex Certify
ಕನ್ನಡ ದುನಿಯಾ       Mobile App
       

Kannada Duniya

3 ಲಕ್ಷ ಭಾರತೀಯರಿಗೆ ಜಪಾನ್ ನಲ್ಲಿ ಉದ್ಯೋಗ ತರಬೇತಿ

ಉದ್ಯೋಗ ತರಬೇತಿಗಾಗಿ 3-5 ವರ್ಷಗಳ ಕಾಲ 3 ಲಕ್ಷ ಭಾರತೀಯ ಯುವಕರನ್ನು ಜಪಾನ್ ಗೆ ಕಳುಹಿಸುವುದಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಸರ್ಕಾರದ ಕೌಶಲ್ಯಾಭಿವೃದ್ಧಿ ಯೋಜನೆ ಅಡಿ ಯುವಕರನ್ನು ಜಪಾನ್ ಗೆ ಕಳುಹಿಸಲಾಗುತ್ತದೆ ಎಂದಿದ್ದಾರೆ.

ತರಬೇತಿ ಖರ್ಚುಗಳನ್ನು ಜಪಾನ್ ಭರಿಸಲಿದೆ. ಈ ಸಂಬಂಧ ಭಾರತ ಹಾಗೂ ಜಪಾನ್ ಮಧ್ಯೆ ‘ಟೆಕ್ನಿಕಲ್ ಇಂಟರ್ನ್ ಟ್ರೈನಿಂಗ್ ಪ್ರೋಗ್ರಾಮ್’ ಒಪ್ಪಂದಕ್ಕೆ ಅಕ್ಟೋಬರ್ 16ರಂದು ಸಹಿ ಬೀಳಲಿದೆ. ಅಲ್ಲಿ ತರಬೇತಿಯ ಜೊತೆಜೊತೆಗೆ ಭಾರತೀಯರಿಗೆ ಉದ್ಯೋಗ ಕೂಡ ದೊರೆಯುತ್ತದೆ.

ವಸತಿ ವ್ಯವಸ್ಥೆಯನ್ನೂ ಕೂಡ ಜಪಾನ್ ಸರ್ಕಾರವೇ ಮಾಡಿಕೊಡಲಿದೆ. ಜಪಾನ್ ಅಗತ್ಯಕ್ಕೆ ತಕ್ಕಂತೆ ಅತ್ಯಂತ ಪಾರದರ್ಶಕವಾಗಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಅಂತಾ ಸಚಿವ ಪ್ರಧಾನ್ ಟ್ವೀಟ್ ಮಾಡಿದ್ದಾರೆ. ತರಬೇತಿ ಪಡೆದು ಜಪಾನ್ ನಿಂದ ಮರಳಿದ ಬಳಿಕ ದೇಶದ ಇಂಡಸ್ಟ್ರಿಗೆ ಅವರು ಕೊಡುಗೆ ನೀಡುತ್ತಾರೆ ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...