alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಕೊಂದು ಟೆಕ್ಕಿ ಆತ್ಮಹತ್ಯೆ, ಕಾರಣ ಏನ್ ಗೊತ್ತಾ?

suicide-image

ಕೌಟುಂಬಿಕ ವಿಷಯಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ತಿದ್ದಾಳೆ ಅನ್ನೋ  ಕಾರಣಕ್ಕೆ ಪುಣೆಯಲ್ಲಿ 34 ವರ್ಷದ ಟೆಕ್ಕಿಯೊಬ್ಬ ಪತ್ನಿಯನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ. ರಾಕೇಶ್ ಗಂಗುರ್ಡೆ ಹಾಗೂ ಸೋನಾಲಿ 4 ವರ್ಷಗಳ ಹಿಂದೆ ಮದುವೆಯಾಗಿದ್ದರು, ದಂಪತಿಗೆ ಮಕ್ಕಳಿರಲಿಲ್ಲ. ಸೋನಾಲಿ ಯಾವಾಗ್ಲೂ ಸಾಮಾಜಿಕ ತಾಣಗಳಲ್ಲಿ ಆ್ಯಕ್ಟಿವ್ ಆಗಿರ್ತಾ ಇದ್ಲು.

ಫ್ಯಾಮಿಲಿ ಪ್ಲಾನಿಂಗ್ ಹಾಗೂ ಇತರ ವೈವಾಹಿಕ ಬದುಕಿನ ವಿಚಾರಗಳನ್ನು ತನ್ನ ಫ್ರೆಂಡ್ಸ್ ಜೊತೆ ಚರ್ಚೆ ಮಾಡ್ತಾ ಇದ್ಲು. ಇದು ಪತಿ ರಾಕೇಶ್ ಗೆ ಇಷ್ಟವಾಗ್ತಾ ಇರಲಿಲ್ಲ. ಹಾಗಾಗಿ ಸೋನಾಲಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ತಿರೋದಾಗಿ ರಾಕೇಶ್ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದ.

ಈ ಘಟನೆ ಬಗ್ಗೆ ಮನೆಯವರಿಗೆ ಮಾಹಿತಿ ಇರಲಿಲ್ಲ, ಸೋನಾಲಿಯ ತಾಯಿ ಮಗಳಿಗೆ ಕರೆ ಮಾಡ್ತಾ ಇದ್ರು. ಆದ್ರೆ ಆಕೆ ಫೋನ್ ರಿಸೀವ್ ಮಾಡಿರಲಿಲ್ಲ. ಕೊನೆಗೆ ಪುಣೆಯಲ್ಲಿದ್ದ ತಮ್ಮ ಮಗ, ಸೋನಾಲಿಯ ಸಹೋದರನನ್ನು ಆಕೆ ಅಪಾರ್ಟ್ ಮೆಂಟ್ ಗೆ ಕಳಿಸಿದ್ರು. ಆತ ಬೆಲ್ ಮಾಡಿದ್ರೂ ಯಾರೂ ಬಾಗಿಲು ತೆರೆಯಲಿಲ್ಲ, ಡೋರ್ ಒಳಗಿನಿಂದ ಲಾಕ್ ಆಗಿತ್ತು. ಪೊಲೀಸರ ಸಹಾಯದಿಂದ ಬಾಗಿಲು ತೆರೆದು ಒಳಹೋಗಿ ನೋಡಿದಾಗ ಸೋನಾಲಿ ಕೋಣೆಯಲ್ಲಿ ಹಾಸಿಗೆ ಮೇಲೆ ಶವವಾಗಿ ಮಲಗಿದ್ಲು, ರಾಕೇಶ್ ನೇಣು ಹಾಕಿಕೊಂಡಿದ್ದ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸ್ರು ತನಿಖೆ ನಡೆಸ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...