alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಸೌಧ ಐಸಿಸ್ ಉಗ್ರರ ಮುಂದಿನ ಟಾರ್ಗೆಟ್ !

isis-2-1489730598

ಉತ್ತರಪ್ರದೇಶ ಪೊಲೀಸರು ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಗೆ ಭದ್ರತೆ ಬಿಗಿಗೊಳಿಸಿದ್ದಾರೆ. ಐಸಿಸ್ ಉಗ್ರರ ಮುಂದಿನ ಟಾರ್ಗೆಟ್ ತಾಜ್ ಮಹಲ್ ಅನ್ನೋ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಆಗ್ರಾದ ತಾಜ್ ಮಹಲ್ ಉಡೀಸ್ ಮಾಡುವುದಾಗಿ ಐಎಸ್ಐಎಸ್ ಉಗ್ರರು ಗ್ರಾಫಿಕ್ಸ್ ಸಹಿತ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದಾರೆ.

ತಾಜ್ ಮಹಲ್ ಚಿತ್ರದ ಹಿನ್ನೆಲೆಯಲ್ಲಿ ಐಸಿಸ್ ಭಯೋತ್ಪಾದಕನೊಬ್ಬ ಗನ್ ಹಿಡಿದು ನಿಂತಿರುವ ಪೋಸ್ಟರ್ ಇದಾಗಿದ್ದು, ಕೆಳಭಾಗದಲ್ಲಿ ನ್ಯೂ ಟಾರ್ಗೆಟ್ ಅಂತಾ ಬರೆಯಲಾಗಿದೆ. ಅರೇಬಿಕ್ ಭಾಷೆಯಲ್ಲಿ ಕೆಲ ಬರಹಗಳು ಕೂಡ ಇವೆ.

ಮಾರ್ಚ್ 14ರಿಂದ್ಲೇ ಪೋಸ್ಟರ್ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದೆ. ಭಾರತದಲ್ಲಿ ಸಂಭಾವ್ಯ ಐಸಿಸ್ ದಾಳಿ ಬಗ್ಗೆ ಕಳೆದ ವರ್ಷ ಕೂಡ ಅಮೆರಿಕ ಎಚ್ಚರಿಕೆ ನೀಡಿತ್ತು. ಉತ್ತರಪ್ರದೇಶದ ಲಖ್ನೋನಲ್ಲಿ ಉಗ್ರ ಸೈಫುಲ್ಲಾನ  ಹತ್ಯೆ ಮಾಡಿದ್ದ ಎಟಿಎಸ್ ಅಧಿಕಾರಿಗಳು ಇತರ 6 ಮಂದಿಯನ್ನು ಸೆರೆಹಿಡಿದಿದ್ದರು. ನಂತರ ಐಸಿಸ್ ಬೆಂಬಲಿಗ ಗುಂಪೊಂದು ಭಾರತದಲ್ಲಿ ದಾಳಿ ನಡೆಸುವಂತೆ ಸಾಮಾಜಿಕ ತಾಣದಲ್ಲಿ ಕರೆಕೊಟ್ಟಿತ್ತು. ಅದರ ಬೆನ್ನಲ್ಲೇ ಐಸಿಸ್ ಈ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...