alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಕಿ ಕೇಸುಗಳ ಇತ್ಯರ್ಥಕ್ಕೆ ಬೇಕಾಗಿದ್ದಾರೆ 70 ಸಾವಿರ ನ್ಯಾಯಾಧೀಶರು

judgeಭಾರತದ ನ್ಯಾಯಾಲಯಗಳಲ್ಲಿ ಈಗಾಗಲೇ ಕೋಟ್ಯಾಂತರ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿಯಿದ್ದು, ಇದಕ್ಕೆ ನ್ಯಾಯಾಧೀಶರುಗಳ ಕೊರತೆಯೇ ಕಾರಣ ಎಂದು ಇತ್ತೀಚೆಗಷ್ಟೇ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್, ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲೇ ಹೇಳಿದ್ದರು.

ಭಾನುವಾರದಂದು ಒಡಿಶಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ 70 ಸಾವಿರ ಮಂದಿ ನ್ಯಾಯಾಧೀಶರ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ. ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ. ಹೀಗಾಗಿ ಪ್ರಕರಣಗಳ ಸಂಖ್ಯೆ ಬೆಳೆಯುತ್ತಲೇ ಇದೆ ಎಂದು ಅವರು ವಿಷಾದಿಸಿದ್ದಾರೆ.

ದೇಶದ ನ್ಯಾಯಾಲಯಗಳಲ್ಲಿ ಒಟ್ಟು 3 ಕೋಟಿ ಪ್ರಕರಣಗಳು ಬಾಕಿ ಇದ್ದು, ಹೈಕೋರ್ಟ್ ಗಳಲ್ಲಿ 30 ಲಕ್ಷ ಪ್ರಕರಣಗಳಿವೆ. ಹೈಕೋರ್ಟ್ ಗೆ ಮಂಜೂರಾಗಿರುವ 900 ನ್ಯಾಯಾಧೀಶರುಗಳ ಹುದ್ದೆ ಪೈಕಿ 450 ಹುದ್ದೆಗಳು ಇಂದಿಗೂ ಖಾಲಿ ಇದೆ ಎಂದು ತಿಳಿಸಿದ್ದಾರೆ. 1987 ರಲ್ಲಿ ಸರ್ಕಾರವೇ ನೇಮಿಸಿದ್ದ ಆಯೋಗ, 40 ಸಾವಿರ ನ್ಯಾಯಾಧೀಶರ ಅಗತ್ಯವಿದೆ ಎಂದು ವರದಿ ನೀಡಿತ್ತು. ಆ ವರದಿ ಸಲ್ಲಿಸಿ 30 ವರ್ಷಗಳಾಗುತ್ತಾ ಬಂದರೂ ದೇಶದಲ್ಲಿರುವ ನ್ಯಾಯಾಧೀಶರ ಸಂಖ್ಯೆ ಕೇವಲ 18 ಸಾವಿರ ಎಂಬ ಚಿತ್ರಣವನ್ನು ಬಿಡಿಸಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...