alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯರಿಗಿಂತ ಹೆಚ್ಚು ಖುಷಿಯಾಗಿದ್ದಾರಂತೆ ಪಾಕಿಸ್ತಾನಿಯರು…!

ಅತಿ ಹೆಚ್ಚು ಖುಷಿಯಾಗಿರುವ ರಾಷ್ಟ್ರಗಳ ಪಟ್ಟಿಯೊಂದನ್ನು ವಿಶ್ವಸಂಸ್ಥೆ ಬುಧವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತ 133ನೇ ಸ್ಥಾನ ಪಡೆದಿದೆ. ಆಶ್ಚರ್ಯವೆಂದ್ರೆ ಈ ಪಟ್ಟಿಯಲ್ಲಿ ಭಾರತ, ಭಯೋತ್ಪಾದನಾ ರಾಷ್ಟ್ರವಾದ ಪಾಕಿಸ್ತಾನ ಹಾಗೂ ನೇಪಾಳಕ್ಕಿಂತ ಹಿಂದಿದೆ.

ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಭಾರತ 11 ಸ್ಥಾನ ಕೆಳಕ್ಕೆ ಕುಸಿದಿದೆ. ಕಳೆದ ವರ್ಷ ಅತಿ ಹೆಚ್ಚು ಖುಷಿಯಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತ 122ನೇ ಸ್ಥಾನದಲ್ಲಿತ್ತು. ಅಪಘಾನಿಸ್ತಾನ ಹೊರತುಪಡಿಸಿ ಮತ್ತೆಲ್ಲ ಸಾರ್ಕ್ ರಾಷ್ಟ್ರಗಳಿಗಿಂತ ಭಾರತ ಹಿಂದಿದೆ. ಅಪಘಾನಿಸ್ತಾನ ಈ ಪಟ್ಟಿಯಲ್ಲಿ 145ನೇ ಸ್ಥಾನದಲ್ಲಿದೆ.

ಪಾಕಿಸ್ತಾನ ಪಟ್ಟಿಯಲ್ಲಿ 75ನೇ ಸ್ಥಾನದಲ್ಲಿದೆ. ಸಾರ್ಕ್ ರಾಷ್ಟ್ರಗಳಲ್ಲಿ ಇದು ಮೊದಲ ಸ್ಥಾನದಲ್ಲಿದೆ. ನೇಪಾಳದ ಸ್ಥಾನ 101 ಆದ್ರೆ ಭೂತಾನ್ 97ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ 115 ಹಾಗೂ ಶ್ರೀಲಂಕಾ 116ನೇ ಸ್ಥಾನದಲ್ಲಿದೆ. ವಿಶ್ವಸಂಸ್ಥೆ ವರದಿ ಪ್ರಕಾರ ಫಿನ್ಲೆಂಡ್ ಅತ್ಯಂತ ಸಂತೋಷಪೂರ್ಣ ದೇಶವಾಗಿದೆ. ನಿಸರ್ಗದ ಜೊತೆ ಬಾಳ್ವೆ, ಒಳ್ಳೆ ಶಾಲೆ, ಶಿಶುಪಾಲನಾ ವ್ಯವಸ್ಥೆ, ಉಚಿತ ಆರೋಗ್ಯ ಸೇವೆ ಎಲ್ಲವೂ ಇಲ್ಲಿನ ಜನರು ಅತಿ ಹೆಚ್ಚು ಖುಷಿಯಾಗಿರಲು ಕಾರಣವಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...