alex Certify
ಕನ್ನಡ ದುನಿಯಾ       Mobile App
       

Kannada Duniya

“ದೀಪಿಕಾಳನ್ನು ಜೀವಂತ ಸುಟ್ಟರೆ 1 ಕೋಟಿ’’

ಪದ್ಮಾವತಿ ಚಿತ್ರಕ್ಕೆ ವಿರೋಧ ವ್ಯಕ್ತವಾಗುವ ಜೊತೆಗೆ ನಟಿ ದೀಪಿಕಾ ಪಡುಕೋಣೆ ಹಾಗೂ ಸಂಜಯ್ ಲೀಲಾ ಬನ್ಸಾಲಿಗೆ ಬೆದರಿಕೆ ನೀಡಲಾಗ್ತಿದೆ. ಭುವನೇಶ್ವರದ ಆಲ್ ಇಂಡಿಯಾ ಕ್ಷತ್ರಿಯ ಮಹಾಸಭಾ ಯುವ ವಿಂಗ್ ನ ನಾಯಕ ದೀಪಿಕಾ ಪಡುಕೋಣೆಗೆ ಬೆದರಿಕೆಯೊಡ್ಡಿದ್ದಾರೆ.

ದೀಪಿಕಾ ವಿರುದ್ಧ ಗುಡುಗಿದ ಭುವನೇಶ್ವರ್ ಸಿಂಗ್, ದೀಪಿಕಾಳನ್ನು ಜೀವಂತ ಸುಡಬೇಕು. ಆಗ ಆಕೆಗೆ ರಾಣಿ ತ್ಯಾಗವೇನು ಎಂಬುದು ಅರ್ಥವಾಗುತ್ತದೆ ಎಂದಿದ್ದಾರೆ. ಯಾರು ದೀಪಿಕಾಳನ್ನು ಜೀವಂತ ಸುಡುತ್ತಾರೋ ಅವರಿಗೆ 1 ಕೋಟಿ ರೂಪಾಯಿ ನೀಡುವುದಾಗಿ ಭುವನೇಶ್ವರ್ ಸಿಂಗ್ ಘೋಷಣೆ ಮಾಡಿದ್ದಾರೆ.

ಚಿತ್ರ ಬಿಡುಗಡೆಗೂ ಮೊದಲು ಚಿತ್ರವನ್ನು ತಮಗೆ ತೋರಿಸಬೇಕೆಂದು ಆಲ್ ಇಂಡಿಯಾ ಕ್ಷತ್ರಿಯ ಮಹಾಸಭಾ ಯುವ ವಿಂಗ್ ಒತ್ತಾಯ ಮಾಡಿದೆ. ದೇಶದಾದ್ಯಂತ ಚಿತ್ರಕ್ಕೆ ವಿರೋಧ ವ್ಯಕ್ತವಾಗ್ತಿದೆ. ಈ ಮಧ್ಯೆ ಚಿತ್ರದಲ್ಲಿ ಯಾವುದೇ ವಿವಾದಿತ ದೃಶ್ಯಗಳಿಲ್ಲವೆಂದು ಬನ್ಸಾಲಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಆದ್ರೂ ವಿರೋಧ ನಿಂತಿಲ್ಲ. ಚಿತ್ರ ಬಿಡುಗಡೆ ದಿನಾಂಕವನ್ನು ಸದ್ಯ ಮುಂದೂಡಲಾಗಿದೆ. ನಿಗದಿಯಂತೆ ಡಿಸೆಂಬರ್ 1ರಂದು ಚಿತ್ರ ತೆರೆ ಮೇಲೆ ಬರಬೇಕಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...