alex Certify
ಕನ್ನಡ ದುನಿಯಾ       Mobile App
       

Kannada Duniya

ಸುಳ್ಳು ಸುದ್ದಿ ತಡೆಗೆ ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ

ಸಾಮಾಜಿಕ ತಾಣಗಳಿಂದ ಹಬ್ಬುವ ಸುಳ್ಳು ಸಂದೇಶಗಳಿಂದ ಉಂಟಾಗುತ್ತಿರುವ ಸಮಸ್ಯೆಗೆ ಜಾಗತಿಕ ಅಂತರ್ಜಾಲ ಹಾಗೂ ಸಾಮಾಜಿಕ ತಾಣಗಳ ಭಾರತೀಯ ಮುಖ್ಯಸ್ಥರನ್ನು ಹೊಣೆ ಮಾಡಲು ಕೇಂದ್ರ ಸರಕಾರದ ಸಮಿತಿ ಮುಂದಾಗಿದೆ.

ಈ ಸಂಸ್ಥೆಗಳ ಬಾರತದ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸಲು ಸಮಿತಿ ಶಿಫಾರಸು ನೀಡಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ದೇಶದ ನಾನಾ ಭಾಗಗಳಲ್ಲಿ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರಿಂದ ಹಲ್ಲೆಗೊಳಗಾಗಿ, ಮೃತಪಟ್ಟಿರುವ ಘಟನೆ ಹೆಚ್ಚುತ್ತಿರುವ ಸಂಬಂಧ ಕೇಂದ್ರ ಸರಕಾರ ಹಿರಿಯ ಸಚಿವರುಗಳು ಆಂತರಿಕ ಸಮಿತಿ ರಚಿಸಿತ್ತು. ಗೃಹ ಇಲಾಖೆ ಕಾರ್ಯದರ್ಶಿ ರಾಜೀವ್‌ ಈ ಸಂಬಂಧ ಕೇಂದ್ರ ಸಚಿವ ರಾಜ್‌ನಾಥ್‌ ಸಿಂಗ್‌ಗೆ ವರದಿ ಸಲ್ಲಿಸಿದ್ದಾರೆ.

ಮೂಲಗಳ ಪ್ರಕಾರ, ಸುಳ್ಳು ಸುದ್ದಿಗಳನ್ನು ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದನ್ನ ತಡೆಯಲು ಎಲ್ಲ ಅಗತ್ಯ ತಂತ್ರಜ್ಞಾನವನ್ನು ಬಳಕೆ ಮಾಡುವಂತೆ ಸಮಿತಿ ವರದಿಯಲ್ಲಿ ಹೇಳಿದೆ.

ಇದು ಅಂತಿಮ ನಿರ್ಧಾರ ಅಲ್ಲ. ಸಮಿತಿಗೆ ನೀಡಿರುವ ವರದಿಯಲ್ಲಿರುವ ಶಿಫಾರಸುಗಳು ಅಷ್ಟೇ. ಈ ಶಿಫಾರಸುಗಳನ್ನು ಸಮಿತಿಯಲ್ಲಿ ಚರ್ಚಿಸಲಾಗುತ್ತದೆ. ಆ ಬಳಿಕ ಪ್ರಧಾನಿ ಮೋದಿ ಅವರಿಗೆ ಸಲ್ಲಿಸಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ತಾಣಗಳು, ಸುಳ್ಳು ಸಂದೇಶಗಳನ್ನು ಹರಡಂತೆ ತಡೆಯಲು ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ಸುಳ್ಳು ಸುದ್ದಿಗಳಿಂದ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುತ್ತಿರುವುದು ಆಂತರಿಕ ಭದ್ರತೆಗೆ ಧಕ್ಕೆ ತರುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಒಬ್ಬ ಎಸ್‌ಪಿಯನ್ನು ನೋಡೆಲ್‌ ಅಧಿಕಾರಿಯನ್ನಾಗಿ ನೇಮಿಸಬೇಕು. ಹಲ್ಲೆ ನಡೆಸುವ ಗುಂಪಿನ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...