alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿರುವ ಭಿಕ್ಷುಕರ ಸಂಖ್ಯೆ ಎಷ್ಟು ಗೊತ್ತಾ…?

ಇವಾಂಕಾ ಟ್ರಂಪ್ ಭೇಟಿ ಸಂದರ್ಭದಲ್ಲಿ ತೆಲಂಗಾಣ ಸರ್ಕಾರ ಭಿಕ್ಷುಕರನ್ನೆಲ್ಲ ಹಿಡಿದು ಹಾಕಿತ್ತು. ಭಿಕ್ಷುಕರನ್ನು ಪತ್ತೆ ಮಾಡಿಕೊಟ್ಟವರಿಗೆ ನಗದು ಬಹುಮಾನವನ್ನೂ ಘೋಷಿಸಿತ್ತು. ಭಾರತದಲ್ಲಿ ಭಿಕ್ಷುಕರೇ ಇಲ್ಲವೆಂದು ಬಿಂಬಿಸುವ ಪ್ರಯತ್ನ ಇದು.

ಆದ್ರೆ ದೇಶದಲ್ಲಿ ಸದ್ಯ 4 ಲಕ್ಷಕ್ಕೂ ಅಧಿಕ ಭಿಕ್ಷುಕರಿದ್ದಾರೆ. ಸರ್ಕಾರ ಬಿಡುಗಡೆ ಮಾಡಿರೋ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿರುವ ಭಿಕ್ಷುಕರ ಸಂಖ್ಯೆ 4,13,670. ಇವರಲ್ಲಿ 2,21,623 ಪುರುಷರು ಹಾಗೂ 1,91,997 ಮಹಿಳೆಯರಿದ್ದಾರೆ .

ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಭಿಕ್ಷುಕರಿದ್ದು, 81,000 ಮಂದಿ ಅಕ್ಷರಶಃ ನಿರ್ಗತಿಕರಾಗಿದ್ದಾರೆ. ಲಕ್ಷದ್ವೀಪದಲ್ಲಿ ಅತ್ಯಂತ ಕಡಿಮೆ ಅಂದ್ರೆ ಕೇವಲ ಇಬ್ಬರು ಭಿಕ್ಷುಕರಿದ್ದಾರೆ. 2011ರ ಗಣತಿಯ ಪ್ರಕಾರ ಉತ್ತರ ಪ್ರದೇಶ ಹಾಗೂ ಆಂಧ್ರಪ್ರದೇಶದಲ್ಲೂ ಅತ್ಯಧಿಕ ಭಿಕ್ಷುಕರಿದ್ದಾರೆ.

ಉತ್ತರ ಪ್ರದೇಶದಲ್ಲಿ 65,835 ಹಾಗೂ ಆಂಧ್ರಪ್ರದೇಶದಲ್ಲಿ 30,218 ಭಿಕ್ಷುಕರು ವಾಸಿಸುತ್ತಿದ್ದಾರೆ. ಆದ್ರೆ ಕೇಂದ್ರಾಡಳಿತ ಪ್ರದೇಶಗಳಾದ ದಿಯು-ದಮನ್, ಅಂಡಮಾನ್ ನಿಕೋಬಾರ್ ಗಳಲ್ಲಿ ಅತ್ಯಂತ ಕಡಿಮೆ ಭಿಕ್ಷುಕರಿದ್ದಾರೆ. ಕಾನೂನಿನ ಪ್ರಕಾರ ಭಿಕ್ಷೆ ಬೇಡುವುದು ಅಪರಾಧ, ಅದಕ್ಕೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...