alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ನಾಟಕದ ಎಲ್ಲ ಹಳ್ಳಿಯಲ್ಲೂ ಇದೆ ಮೊಬೈಲ್ ನೆಟ್ ವರ್ಕ್..!

download

ಇದು ಮೊಬೈಲ್ ಯುಗ. ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಮೊಬೈಲ್ ನಲ್ಲಿ ಬ್ಯುಸಿ. ಆದ್ರೆ ಈಗ ನಾವು ಹೇಳುವ ಸುದ್ದಿ ಕೇಳಿದ್ರೆ ನಿಮಗೆ ಆಶ್ಚರ್ಯವಾಗಬಹುದು. ಆದ್ರೆ ಇದು ವಾಸ್ತವ. ದೇಶದ 55 ಸಾವಿರ ಹಳ್ಳಿಗಳಿಗೆ ಇನ್ನೂ ಮೊಬೈಲ್ ಸಂಪರ್ಕವೇ ಇಲ್ಲ.

ಯಸ್, ಸಚಿವ ಮನೋಜ್ ಸಿನ್ಹಾ ಈ ವಿಷಯವನ್ನು ರಾಜ್ಯಸಭೆ ಮುಂದಿಟ್ಟಿದ್ದಾರೆ. ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ದೇಶದಲ್ಲಿ ಮೊಬೈಲ್ ವ್ಯಾಪ್ತಿಯನ್ನು ವಿಸ್ತರಿಸುವುದಾಗಿ ಅವರು ಹೇಳಿದ್ದಾರೆ. ಜಮ್ಮು ಕಾಶ್ಮೀರ, ಉತ್ತರಾಖಂಡ್ ಮತ್ತು ಹಿಮಾಚಲ ಪ್ರದೇಶಕ್ಕೆ ಮೊದಲ ಆಧ್ಯತೆ ನೀಡುವುದಾಗಿ ಅವರು ಹೇಳಿದ್ದಾರೆ.

ವರದಿ ಪ್ರಕಾರ, ಒರಿಸ್ಸಾದ 10,398 ಹಳ್ಳಿಗಳು ಮೊಬೈಲ್ ನಿಂದ ವಂಚಿತವಾಗಿವೆ. ಈ ಮೂಲಕ ಒರಿಸ್ಸಾ ಮೊದಲ ಸ್ಥಾನದಲ್ಲಿದೆ. ಜಾರ್ಖಂಡ್ ದ 5949 ಗ್ರಾಮ, ಮಧ್ಯಪ್ರದೇಶ 5926 ಗ್ರಾಮ, ಛತ್ತೀಸ್ಗಢದ 4.041 ಹಳ್ಳಿ ಹಾಗೂ  ಆಂಧ್ರ ಪ್ರದೇಶದ 3.812 ಹಳ್ಳಿಗಳಿಗೆ ಮೊಬೈಲ್ ಸಂಪರ್ಕವಿಲ್ಲ.

ವಿಶೇಷವೆಂದ್ರೆ ಕರ್ನಾಟಕ, ಕೇರಳ ಹಾಗೂ ಪುದುಚೇರಿಯ ಎಲ್ಲ ಹಳ್ಳಿಗಳೂ ಮೊಬೈಲ್ ಸಂಪರ್ಕ ಹೊಂದಿವೆ ಎಂದು ಸಚಿವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...