alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದಲ್ಲಿರುವ ಫೇಕ್ ಎಂಜಿನಿಯರಿಂಗ್ ಕಾಲೇಜ್ ಗಳ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಿ…!

ದೇಶದಾದ್ಯಂತ ಸುಮಾರು 277 ಫೇಕ್ ಎಂಜಿನಿಯರಿಂಗ್ ಕಾಲೇಜುಗಳಿವೆ ಎಂಬ ವಿಚಾರ ಸಂಸತ್ ನಲ್ಲೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಮಾನವ ಸಂಪನ್ಮೂಲಾಭಿವೃದ್ಧಿ ಸಚಿವರಾದ ಸತ್ಯಪಾಲ್ ಸಿಂಗ್ ಈ ಬಗ್ಗೆ ಇಂಟ್ರೆಸ್ಟಿಂಗ್ ಆದಂತಾ ಮಾಹಿತಿಯನ್ನು ದಾಖಲೆಗಳ ಸಮೇತ ಸದನದ ಗಮನಕ್ಕೆ ತಂದಿದ್ದಾರೆ. ಆ ಪ್ರಕಾರ ದೇಶದಲ್ಲಿ ಎಂಜಿನಿಯರಿಂಗ್ ಮತ್ತಿತರ ತಾಂತ್ರಿಕ ಕೋರ್ಸ್ ಗಳ 277 ಫೇಕ್ ಕಾಲೇಜುಗಳಿದ್ದು, ದೆಹಲಿಯಲ್ಲಿ ಫೇಕ್ ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ ಹೆಚ್ಚಿದೆಯಂತೆ.

ಅಖಿಲ ಭಾರತ ತಾಂತ್ರಿಕ ವಿದ್ಯಾಲಯಗಳ ಒಕ್ಕೂಟದ ಅಡಿಯಲ್ಲಿ ಮಾನ್ಯತೆಯನ್ನು ಪಡೆಯದೆ ಇರುವಂತಾ ಕಾಲೇಜುಗಳ ಪಟ್ಟಿ ತುಂಬಾನೇ ದೊಡ್ಡದಿದೆ. ಹಲವು ಕೋರ್ಸ್ ಗಳನ್ನ ನಡೆಸೋಕೆ ಅನುಮತಿ ಇಲ್ಲದಿದ್ರೂ ಆ ಕೋರ್ಸ್ ಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಈಗಾಗ್ಲೇ ಅಂತಾ 277 ಕಾಲೇಜುಗಳನ್ನ ಗುರುತಿಸಿ ಅವುಗಳಿಗೆ ಮಾನ್ಯತೆ ಪಡೆಯುವಂತೆ ಸೂಚನೆ ನೀಡಲಾಗಿದೆಯಂತೆ.

ದೆಹಲಿಯಲ್ಲಿ 66, ತೆಲಂಗಾಣ 35, ಪಶ್ಚಿಮ ಬಂಗಾಳ 27, ಕರ್ನಾಟಕ 23, ಉತ್ತರ ಪ್ರದೇಶ 22, ಹಿಮಾಚಲ ಪ್ರದೇಶದಲ್ಲಿ 18, ಬಿಹಾರ್ ನಲ್ಲಿ 17, ಮಹಾರಾಷ್ಟ್ರದಲ್ಲಿ 16, ತಮಿಳುನಾಡಿನ 11 ಕಾಲೇಜುಗಳನ್ನ ಫೇಕ್ ಅಂತ ಗುರುತಿಸಲಾಗಿದೆ. ಅದೇ ರೀತಿ ಗುಜರಾತ್ ನ 8, ಆಂಧ್ರ ಮತ್ತು ಚತ್ತೀಸ್ ಗಢ್ ನ ತಲಾ 7 , ಪಂಜಾಬ್ ನಲ್ಲಿ 5, ರಾಜಸ್ಥಾನ ಮತ್ತು ಉತ್ತರಾಖಂಡ್ ನಲ್ಲಿ ತಲಾ 3 ಫೇಕ್ ಕಾಲೇಜುಗಳನ್ನ ಗುರುತಿಸಲಾಗಿದೆ.

ಸದ್ಯ ಅಯಾ ರಾಜ್ಯಗಳ ಯೂನಿವರ್ಸಿಟಿ ಗ್ರ್ಯಾಂಟ್ ಕಮಿಷನ್ ಗೆ ಕಾಲೇಜುಗಳ ಪಟ್ಟಿಯನ್ನು ನೀಡಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮಾನ್ಯತೆ ಪಡೆಯದೆ ಇರುವ ಕಾಲೇಜುಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...