alex Certify
ಕನ್ನಡ ದುನಿಯಾ       Mobile App
       

Kannada Duniya

ಉಚಿತ ವೈಫೈನಲ್ಲಿ ಇದನ್ನೇ ಹೆಚ್ಚಾಗಿ ನೋಡ್ತಾರಂತೆ ಭಾರತೀಯರು

ಸಂಪರ್ಕ ಕ್ರಾಂತಿಯಿಂದಾಗಿ ಏನೆಲ್ಲಾ ಬೆಳವಣಿಗೆಗಳಾಗಿವೆ ಎಂಬುದನ್ನು ನೋಡಿದ್ದೀರಿ. ಸರ್ಕಾರ ಮತ್ತು ಕೆಲವು ಸಂಸ್ಥೆಗಳು ಉಚಿತವಾಗಿ ವೈಫೈ ಸೌಲಭ್ಯವನ್ನು ಕಲ್ಪಿಸಿದ್ದು, ಇಂತಹ ಸೌಲಭ್ಯ ಹೇಗೆಲ್ಲಾ ದುರುಪಯೋಗವಾಗ್ತಿದೆ ಎಂಬುದು ವರದಿಯೊಂದರಲ್ಲಿ ಗೊತ್ತಾಗಿದೆ.

ಜಾಗತಿಕ ಸಂಸ್ಥೆಯೊಂದು ನಡೆಸಿದ ಅಧ್ಯಯನದ ವರದಿಯಲ್ಲಿ ಫ್ರೀ ವೈಫೈ ಜೋನ್ ನಲ್ಲಿ ಭಾರತೀಯರು ಹೆಚ್ಚಾಗಿ ನೀಲಿ ಚಿತ್ರಗಳನ್ನು ವೀಕ್ಷಿಸುತ್ತಾರೆ ಎಂಬುದು ತಿಳಿದು ಬಂದಿದೆ.

ಫ್ರೀ ವೈಫೈ ಬಳಕೆಯ ಕುರಿತಾಗಿ ಭಾರತದಲ್ಲಿ ಸಂದರ್ಶಿಸಿದ 1000 ಮಂದಿಯಲ್ಲಿ 400 ಮಂದಿ ಅಶ್ಲೀಲ ದೃಶ್ಯಗಳನ್ನು ನೋಡಿದ್ದಾಗಿ ಹೇಳಿದ್ದಾರೆ.

ವಿಶ್ವದಲ್ಲಿ ಪ್ರತಿ 6 ಮಂದಿಯಲ್ಲಿ ಒಬ್ಬರು ನೀಲಿಚಿತ್ರ ವೀಕ್ಷಣೆಗೆ ಉಚಿತ ವೈಫೈ ಬಳಸಿದರೆ, ಭಾರತದಲ್ಲಿ ಪ್ರತಿ ಮೂವರಲ್ಲಿ ಒಬ್ಬರು ನೀಲಿ ಚಿತ್ರ ವೀಕ್ಷಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಚಿತ್ರಗಳನ್ನು ನೋಡುವ ದೇಶಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದು, ನಂತರದಲ್ಲಿ ಜಪಾನ್ ಹಾಗೂ ಮೆಕ್ಸಿಕೋ ದೇಶಗಳಿವೆ.

ಭಾರತದಲ್ಲಿ ಶೇ. 31 ರಷ್ಟು ಮಂದಿ ಉಚಿತ ವೈಫೈನಲ್ಲಿ ನೀಲಿ ಚಿತ್ರ ನೋಡುತ್ತಾರೆ. ಅವರಲ್ಲಿ ಶೇ. 34 ಮಂದಿ ಬಸ್, ರೈಲು ನಿಲ್ದಾಣಗಳಲ್ಲಿ, ಶೇ 24 ರಷ್ಟು ಮಂದಿ ಲೈಬ್ರರಿಗಳಲ್ಲಿ ನೀಲಿ ಚಿತ್ರ ವೀಕ್ಷಿಸುತ್ತಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...