alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದರಾಬಾದ್ ನಲ್ಲಿ ಹಾರಾಡುತ್ತಿದೆ ಅತಿ ದೊಡ್ಡ ತ್ರಿವರ್ಣ ಧ್ವಜ

India_flag-345ಮುಂಬೈನ ‘ಫ್ಲಾಗ್ ಫೌಂಡೇಶನ್ ಆಫ್ ಇಂಡಿಯಾ’ ವಿನ್ಯಾಸ ಮಾಡಿರುವ ದೇಶದ ಅತೀ ದೊಡ್ಡ ತ್ರಿವರ್ಣ ಧ್ವಜ ಹೈದರಾಬಾದ್ ನಲ್ಲಿ ಹಾರಾಡುತ್ತಿದೆ. ತೆಲಂಗಾಣ ರಾಜ್ಯದ ಎರಡನೇ ವಾರ್ಷಿಕೋತ್ಸವ ಅಂಗವಾಗಿ ಹುಸೇನ್ ಸಾಗರ್ ಸರೋವರ ಬಳಿಯ ಸಂಜೀವಯ್ಯ ಪಾರ್ಕ್ ನಲ್ಲಿ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಈ ಧ್ವಜ ಸ್ಥಂಭ ನಿರ್ಮಿಸಲಾಗಿದೆ.

ಈ ಧ್ವಜ ಸ್ಥಂಭವು 100 ಟನ್ ತೂಕ ಇದ್ದರೆ, ಬಾವುಟ 65 ಕೆ.ಜಿ. ತೂಕವನ್ನು ಹೊಂದಿದೆ. ಪಶ್ಚಿಮ ಬಂಗಾಳದ ಸಂಸ್ಥೆಯೊಂದು ತಯಾರಿಸಿದ ಉಕ್ಕಿನ ಪೈಪ್ ಗಳನ್ನು ಸ್ಥಂಭ ನಿರ್ಮಾಣಕ್ಕೆ ಬಳಸಿಕೊಳ್ಳಲಾಗಿದೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಇದರ ಧ್ವಜಾರೋಹಣ ನೆರವೇರಿಸಿದ್ದಾರೆ.

ಈಗಾಗಲೇ ರಾಯಪುರ, ರಾಂಚಿ, ಫರೀದಾಬಾದ್, ದೆಹಲಿ ಹಾಗು ಲಖನೌಗಳಲ್ಲಿ ದೊಡ್ಡ ರಾಷ್ಟ್ರ ಧ್ವಜಗಳನ್ನು ಹಾರಿಸಲಾಗಿದ್ದು, ಈಗ ಹೈದರಾಬಾದ್ ಕೂಡಾ ಆ ಪಟ್ಟಿಗೆ ಸೇರಿದೆ. ತೆಲಂಗಾಣ ರಾಜ್ಯದ ಎರಡನೇ ವಾರ್ಷಿಕೋತ್ಸವದ ನೆಪದಲ್ಲಿ ಜಾಹೀರಾತಿಗೆ ನೂರಾರು ಕೋಟಿ ರೂ. ಗಳನ್ನು ವೆಚ್ಚ ಮಾಡುತ್ತಿದ್ದಾರೆಂಬ ಟೀಕೆಗಳ ನಡುವೆಯೂ ವರ್ಷಾಚರಣೆ ಸಂಭ್ರಮ ಅದ್ದೂರಿಯಾಗಿ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...