alex Certify
ಕನ್ನಡ ದುನಿಯಾ       Mobile App
       

Kannada Duniya

ಬಜೆಟ್ 2018: ದುಬಾರಿಯಾಯ್ತು ಟಿವಿ, ಇಳಿಕೆಯಾಯ್ತು ಚಪ್ಪಲಿ

ಅರುಣ್ ಜೇಟ್ಲಿ ಬಹು ನಿರೀಕ್ಷಿತ ಬಜೆಟ್ ಮಂಡನೆಯಾಗಿದೆ. ಅರುಣ್ ಜೇಟ್ಲಿ ಬಜೆಟ್ ನಲ್ಲಿ ಅನೇಕ ಕನಸುಗಳನ್ನು ಬಿತ್ತಿದ್ದಾರೆ. ಅರುಣ್ ಜೇಟ್ಲಿ ಬಜೆಟ್ ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಜೆಟ್ ನಲ್ಲಿ ಅನೇಕ ವಸ್ತುಗಳು ದುಬಾರಿಯಾಗಿವೆ.

ಕಂಪ್ಯೂಟರ್, ಮೊಬೈಲ್ ಫೋನ್, ಟಿವಿ ದರದಲ್ಲಿ ಏರಿಕೆಯಾಗಿದೆ. ಬಡವರು, ಮಧ್ಯಮ ವರ್ಗದವರಿಗೆ ಆಪ್ತವಾಗಿರುವ ಈ ಬಜೆಟ್ ನಲ್ಲಿ ಪಾದರಕ್ಷೆ ಬೆಲೆ ಅಗ್ಗವಾಗಿದೆ. ಕಚ್ಚಾ ಗೋಡಂಬಿ, ಲೆದರ್ ಉತ್ಪನ್ನದ ಬೆಲೆ ಇಳಿಕೆಯಾಗಿದೆ.

ಇನ್ನು ಹಿರಿಯ ನಾಗರಿಕರಿಗೆ ಆರೋಗ್ಯ ವಿಮೆ ಮೇಲಿನ ತೆರಿಗೆ ರಿಯಾಯಿತಿ 50,000 ರೂಪಾಯಿಗೆ ಏರಿಕೆಯಾಗಿದೆ. ಎಷ್ಟು ಸಂಬಳವಿದ್ಯೋ ಅದ್ರಲ್ಲಿ 40 ಸಾವಿರ ರೂಪಾಯಿ ಕಡಿತಗೊಳಿಸಿ ನಂತ್ರ ತೆರಿಗೆ ವಿಧಿಸುವುದಾಗಿ ಅರುಣ್ ಜೇಟ್ಲಿ ಹೇಳಿದ್ದಾರೆ. ಇದು ಉದ್ಯೋಗಿಗಳ ಮುಖದಲ್ಲಿ ನಗು ಮೂಡುವಂತೆ ಮಾಡಿದೆ. ಅಬಕಾರಿ ಸುಂಕದಲ್ಲಿ ಶೇಕಡಾ 15ರಷ್ಟು ಏರಿಕೆಯಾಗಿದೆ. ಈ ವರ್ಷ 12 ತಿಂಗಳ ಬದಲು 11 ತಿಂಗಳು ಜಿ ಎಸ್ ಟಿ ಎಂದು ಜೇಟ್ಲಿ ಹೇಳಿದ್ದಾರೆ.

ವಿದೇಶದಿಂದ ಆಮದಾಗುವ ವಸ್ತುಗಳ ಮೇಲೆ ಕಸ್ಟಮ್ ಡ್ಯೂಟಿಯಲ್ಲಿ ಏರಿಕೆಯಾಗಿದೆ. ಮೊಬೈಲ್ ಫೋನ್ ಗಳ ಮೇಲೆ ಶೇಕಡಾ 20ರಷ್ಟು ಕಸ್ಟಮ್ ಡ್ಯೂಟಿ ಹೆಚ್ಚಾಗಿದೆ. ಟಿವಿ ಮೇಲೆಯೂ ಕಸ್ಟಮ್ ಡ್ಯೂಟಿ ಹೆಚ್ಚಾಗಿದ್ದು, ಟಿವಿ ಬೆಲೆ ಕೂಡ ದುಬಾರಿಯಾಗಿದೆ. ಎಲ್ ಇಡಿ ಹಾಗೂ ಎಲ್ ಸಿಡಿ ಟಿವಿಗಳ ಬೆಲೆ ಏರಿಕೆಯಾಗಲಿದೆ.
ಎಲೆಕ್ಟ್ರಾನಿಕ್ ಸರಕುಗಳು ದುಬಾರಿಯಾಗಿವೆ. ಲ್ಯಾಪ್ ಟಾಪ್ ದುಬಾರಿಯಾಗಿದೆ. ಕಂಪ್ಯೂಟರ್ ಬೆಲೆ ಕೂಡ ದುಬಾರಿಯಾಗಲಿದೆ.

ಫ್ರಿಜ್ ಬೆಲೆ ಕೂಡ ಹೆಚ್ಚಳವಾಗಿದೆ. ಧೂಮಪಾನಿಗಳ ಜೇಬು ಸುಡಲಿದೆ. ಸಿಗರೇಟಿನ ಬೆಲೆ ಏರಿಕೆಯಾಗಿದೆ. ಹೊಟೇಲ್ ಊಟ, ಸಿನಿಮಾ, ಹಣ್ಣು ತರಕಾರಿ ಜ್ಯೂಸ್, ವಜ್ರಗಳು, ಸೌಂದರ್ಯ ವರ್ದಕ, ಸುಗಂಧ ದ್ರವ್ಯಗಳ ಬೆಲೆಯಲ್ಲಿ ಏರಿಕೆಯಾಗಿದೆ.

ವಾಹನದ ಬಿಡಿ ಭಾಗಗಳು, ಪೀಠೋಪಕರಣಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಕಚ್ಚಾ ಅಡುಗೆ ಎಣ್ಣೆ, ಸಂಸ್ಕರಿಸಿದ ಅಡುಗೆ ಎಣ್ಣೆ, ವಿಕಲಾಂಗರ ತ್ರಿಚಕ್ರ ವಾಹನ, ಮಕ್ಕಳ ಆಟಿಕೆ, ವಿಡಿಯೋ ಗೇಮ್ ಉಪಕರಣ, ಕ್ರೀಡಾ ಉಪಕರಣ, ಇಟ್ಟಿಗೆ, ವಿದೇಶಿ ಕಾರ್, ಆಮದು ಚಿನ್ನ, ವಿದೇಶದ ಸೈಕಲ್, ಫೋನ್ ಬಿಲ್, ಮೋಟರ್ ಬೈಕ್ ಇವೆಲ್ಲವೂ ದುಬಾರಿಯಾಗಲಿವೆ.

ಉಪ್ಪು, ಸೌರ ಘಟಕ, ಜೀವ ಉಳಿಸುವ ಔಷಧಿ, ಚರ್ಮದ ಉತ್ಪನ್ನ, ಕಚ್ಚಾ ಗೋಡಂಬಿ, ಪೆಟ್ರೋಲ್, ಡೀಸೆಲ್ ಗಳ ಬೆಲೆಯಲ್ಲಿ ಇಳಿಕೆಯಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...