alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಇಳಿಕೆಯಾಗಿದೆಯಂತೆ ಭಾರತದಲ್ಲಿನ ಬಡವರ ಸಂಖ್ಯೆ

ಬಡತನ ಪ್ರಮಾಣವನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತ ದೈತ್ಯ ಹೆಜ್ಜೆಯನ್ನಿಟ್ಟಿದೆ. ಕೇವಲ 10 ವರ್ಷಗಳಲ್ಲಿ ತನ್ನ ಬಡತನದ ದರವನ್ನು ಶೇ.55 ರಿಂದ ಶೇ.28 ಕ್ಕೆ ಇಳಿಸಿಕೊಂಡಿದೆ. ಈ ಸಂಗತಿಯನ್ನು 2018ರ ಗ್ಲೋಬಲ್ ಮಲ್ಟಿ ಡೈಮೆನ್ಶನಲ್ ಪಾವರ್ಟಿ ಇಂಡೆಕ್ಸ್(ಎಂಪಿಐ) ಹೊರಗೆಡಹಿದೆ.

2005-06 ರಿಂದ 2015-16 ರ ಮಧ್ಯೆ ಭಾರತದಲ್ಲಿ 27.1 ಕೋಟಿ ಜನರು ಬಡತನದ ಬವಣೆಯಿಂದ ಹೊರಬಂದಿದ್ದಾರೆ.

63.5 ಕೋಟಿಯಷ್ಟಿದ್ದ ಬಡವರ ಸಂಖ್ಯೆ 36.4 ಕೋಟಿಗೆ ಇಳಿದಿದೆ ಎಂದು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್‌ಡಿಪಿ) ಹಾಗೂ ಆಕ್ಸ್ ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ (ಒಪಿಎಚ್‌ಐ) ಬಿಡುಗಡೆಗೊಳಿಸಿದ ವರದಿಯಲ್ಲಿ ಹೇಳಲಾಗಿದೆ.

ಭಾರತದ ಈ ಗಣನೀಯ ಬಡತನ ತಗ್ಗಿಸಿದ ಸಾಧನೆಯು ಚೀನಾವು ಎರಡು ದಶಕದಲ್ಲಿ ಮಾಡಿದ ಸಾಧನೆಗೆ ಸಮವಾಗಿದೆ. ಆದಾಗ್ಯೂ, ಭಾರತ ಈಗಲೂ ವಿಶ್ವದಲ್ಲೇ ಅತಿ ಹೆಚ್ಚು ಮಂದಿ ಬಹು ಆಯಾಮದ ಬಡತನದೊಂದಿಗೆ ವಾಸಿಸುತ್ತಿರುವ ಜನರನ್ನು ಹೊಂದಿದೆ.

ಈ ಸಂಖ್ಯೆ 36.4 ಕೋಟಿಯಷ್ಟಿದೆ. ಇವರಲ್ಲಿ 15.6 ಕೋಟಿ ಮಂದಿ ಮಕ್ಕಳಾಗಿದ್ದಾರೆ ಎಂದು ಈ ವರದಿ ಹೇಳಿದೆ.

ಬಡತನ ನಿರ್ಮೂಲನೆಯಲ್ಲಿ ಜಾರ್ಖಂಡ್ ಭಾರೀ ಸುಧಾರಣೆ ತೋರಿಸಿದೆ, ಅದರೊಂದಿಗೆ ಅರುಣಾಚಲ, ಬಿಹಾರ ಹಾಗೂ ಚತ್ತೀಸ್‌ಗಢ ರಾಜ್ಯಗಳೂ ಹೆಜ್ಜೆ ಹಾಕಿವೆ. ನಾಗಾಲ್ಯಾಂಡ್ ಮಾತ್ರ ತುಸು ಹಿಂದೆ ಬಿದ್ದಿದೆ. ಬಿಹಾರ ಈಗಲೂ (2015-16ನೇ ಸಾಲಿಗೆ) ಅತ್ಯಂತ ಬಡ ರಾಜ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...