alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವಾತಂತ್ರ್ಯ ದಿನದ ಭಾಷಣದಲ್ಲೇನಿರಬೇಕು? ಮೋದಿಗೆ ಸಿಕ್ತು 30000 ಕ್ಕೂ ಹೆಚ್ಚು ಸಲಹೆ

ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ ಮನೆ ಮಾಡ್ತಿದೆ. ಕೆಂಪು ಕೋಟೆ ಮೇಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿರಂಗಾ ಹಾರಿಸಲಿದ್ದಾರೆ. ತಮ್ಮ ಅಧಿಕಾರವಧಿಯ ಕೊನೆಯ ಸ್ವಾತಂತ್ರ್ಯ ದಿನವನ್ನ ಆಚರಿಸುತ್ತಿರುವ ಮೋದಿ ಭಾಷಣದ ಮೇಲೆ ಎಲ್ಲರ ಕಣ್ಣಿದೆ.

ಪ್ರಧಾನ ಮಂತ್ರಿ ಸಚಿವಾಲಯ ಎರಡು ವಾರಗಳ ಹಿಂದೆಯೇ ಜನರ ಸಲಹೆ ಕೇಳಿತ್ತು. ಪ್ರಧಾನಿ ಭಾಷಣದಲ್ಲಿ ನೀವು ಯಾವ ವಿಷ್ಯ ಕೇಳಲು ಬಯಸುತ್ತೀರೆಂದು ಕೇಳಲಾಗಿತ್ತು. ಪ್ರಧಾನಿ ಕಚೇರಿಗೆ ಈ ಸಂಬಂಧ ಸಲಹೆ ನೀಡುವಂತೆ ಕೇಳಲಾಗಿತ್ತು. my.gov.in ಹಾಗೂ ನಮೋ ಆಪ್ ಹಾಗೂ ಪ್ರಧಾನ ಮಂತ್ರಿ ಸಚಿವಾಲಯದ ವೆಬ್ಸೈಟ್ ಮೂಲಕ ಜನರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಲಾಗಿತ್ತು.

ದೊಡ್ಡ ಪ್ರಮಾಣದಲ್ಲಿ ಜನರು ಪಿಎಂಗೆ ಸಲಹೆ ರವಾನೆ ಮಾಡಿದ್ದಾರೆ. 30,000ಕ್ಕೂ ಹೆಚ್ಚು ಸಲಹೆಗಳು ಬಂದಿವೆಯಂತೆ. 2000ಕ್ಕೂ ಹೆಚ್ಚು ಮಂದಿ ನಮೋ ಹೆಸರಿಗೆ ಪತ್ರ ಬರೆದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಉದ್ಯೋಗ, ಕುಟುಂಬ ಯೋಜನೆ ಹಾಗೂ ಆರೋಗ್ಯ ಸೇವೆಗಳ ಬಗ್ಗೆ ಮಾತನಾಡುವಂತೆ ಅನೇಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...