alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪ್ರದೇಶದಲ್ಲೂ ‘ಅಮ್ಮ’ ಕ್ಯಾಂಟೀನ್

amma-up-canteen

ಲಖ್ನೋ: ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಜಾರಿಗೆ ತಂದಿದ್ದ ಜನಪ್ರಿಯ ಯೋಜನೆಗಳಲ್ಲಿ ‘ಅಮ್ಮ ಕ್ಯಾಂಟೀನ್’ ಒಂದಾಗಿದೆ.

ಕಡಿಮೆ ದರದಲ್ಲಿ ತಿಂಡಿ, ಊಟ ನೀಡುವ ಈ ಯೋಜನೆಯಿಂದ ಬಡ, ಮಧ್ಯಮ ವರ್ಗದವರಿಗೆ ಅನುಕೂಲವಾಗಿದೆ.

‘ಅಮ್ಮ ಕ್ಯಾಂಟೀನ್’ ಮಾದರಿಯಲ್ಲಿಯೇ ಕರ್ನಾಟಕದಲ್ಲಿ ‘ಇಂದಿರಾ ಕ್ಯಾಂಟೀನ್’ ಜಾರಿಗೆ ತರಲಾಗುತ್ತಿದೆ. ಈಗಾಗಲೇ ಯೋಜನೆ ಜಾರಿಗೆ ಪ್ರಕ್ರಿಯೆಗಳು ಆರಂಭವಾಗಿವೆ.

ಇದಾದ ಬಳಿಕ ಉತ್ತರ ಪ್ರದೇಶದಲ್ಲಿಯೂ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ‘ಅನ್ನಪೂರ್ಣ ಭೋಜನಾಲಯ’ ಹೆಸರಲ್ಲಿ ಕ್ಯಾಂಟೀನ್ ಗಳನ್ನು ಆರಂಭಿಸಲಾಗುತ್ತಿದೆ.

3 ರೂಪಾಯಿಗೆ ತಿಂಡಿ, 5 ರೂಪಾಯಿಗೆ ಊಟ ಕೊಡಲಾಗುತ್ತದೆ. ಬ್ರೇಕ್ ಫಾಸ್ಟ್ ಮೆನುವಿನಲ್ಲಿ ದಾಲಿಯಾ, ಇಡ್ಲಿ ಸಾಂಬಾರ್, ಪೊಹಾ, ಚಾಯ್ ಪಕೋಡ, ಊಟದ ಮೆನುವಿನಲ್ಲಿ ರೋಟಿ, ಅನ್ನ, ದಾಲ್, ಪಲ್ಯ ಇವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಯೋಜನೆ ಜಾರಿಗೆ ಹಸಿರು ನಿಶಾನೆ ತೋರಿದ್ದಾರೆ. ರಾಜ್ಯದಲ್ಲಿ ಯಾರೂ ಹಸಿದ ಹೊಟ್ಟೆಯಲ್ಲಿ ಮಲಗಬಾರದು ಎಂಬುದು ಯೋಗಿಯವರ ಕಾಳಜಿಯಾಗಿದೆ.

ಇದಕ್ಕಾಗಿ ಸುಲಭ ದರಲ್ಲಿ ತಿಂಡಿ, ಊಟ ನೀಡುವ ‘ಅನ್ನಪೂರ್ಣ ಭೋಜನಾಲಯ’ ಆರಂಭಿಸಲಾಗುವುದು ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...