alex Certify
ಕನ್ನಡ ದುನಿಯಾ       Mobile App
       

Kannada Duniya

ದೇವಾಲಯದಲ್ಲಿ ಸ್ವಂತ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿರುವ ಸಾಧು

ಕೋಲ್ಕತ್ತಾ: ದೇವಾಲಯಗಳ ನಿರ್ಮಿಸಿ, ದೇವರ ಮೂರ್ತಿಗಳನ್ನಿಟ್ಟು ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಾಪುರುಷ ತನ್ನ ಮೂರ್ತಿಯನ್ನು ತಾನೇ ಪ್ರತಿಷ್ಠಾಪಿಸಿ, ಅದಕ್ಕೆ ದಿನ ನಿತ್ಯ ಪೂಜೆ ಸಲ್ಲಿಸುತ್ತಿರುವ ವಿಚಿತ್ರ ಘಟನೆ ಕೋಲ್ಕತ್ತಾದ ಬುರುದ್ವಾನ್​ ನಿಯಮಂಟಪುರ್ ನಲ್ಲಿ ಬೆಳಕಿಗೆ ಬಂದಿದೆ.

ಅಚ್ಚರಿಯಾದರೂ ಇದು ನಿಜ. ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಿಂದ 125 ಕಿ.ಮೀ. ದೂರ ಇರುವ ಬುರುದ್ವಾನ್​ ನಿಯಮಂಟಪುರ್​ನ ಶ್ರೀ ಶ್ರೀ ಸಿಂಗಾರಾಯ್​ ಬಾಬಾ ಧಾಮ್​ ಆದಿ ಶಕ್ತಿ ಶಿವ್​ ಮಂದಿರ್​ ದಲ್ಲಿ ಸಿಂಗಾರಾಯ್​ ಎಂಬ ಸಾಧು ತಮ್ಮ ಎರಡು ಅವತಾರಗಳ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಒಂದರಲ್ಲಿ ತ್ರಿಶೂಲ ಹಿಡಿದಿದ್ದರೆ, ಇನ್ನೊಂದರಲ್ಲಿ ಗಧೆ ಹಿಡಿದಿದ್ದಾರೆ. ಇದಕ್ಕೆ ಪ್ರತಿ ದಿನ ಅರ್ಚನೆ ಮಾಡಿ, ಪೂಜಾ ವಿಧಿವಿಧಾನ ಸಲ್ಲಿಸುತ್ತಾರೆ.

ಅಸಲಿಗೆ ಸಾಧು ಈ ರೀತಿ ಮಾಡಲು ಕಾರಣ, ಒಮ್ಮೆ ಕನಸಿನಲ್ಲಿ ಬಂದ ದೇವರು, ತನ್ನನ್ನು ತಾನೇ ಪೂಜೆ ಮಾಡಿಕೊಳ್ಳುವಂತೆ ತಿಳಿಸಿದರಂತೆ. ಈ ಹಿನ್ನಲೆಯಲ್ಲಿ ಸಿಂಗಾರಾಯ್​ ತನ್ನ ಪ್ರತಿಮೆ ಸ್ಥಾಪನೆ ಮಾಡಿ ಪೂಜಿಸುತ್ತಿದ್ದಾರೆ. ದೇವರು ನಮ್ಮ ಒಳಗೆ ಇರುವುದರಿಂದ ನಾವು ನಮ್ಮ ಆತ್ಮ, ಯೋಚನೆಯನ್ನು ಪರಿಶುದ್ಧವಾಗಿ ಇಟ್ಟುಕೊಳ್ಳಬೇಕು. ನನ್ನನ್ನೇ ನಾನು ಆರಾಧನೆ ಮಾಡಿಕೊಳ್ಳುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂಬುದು ಸಾಧುವಿನ ಮಾತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...