alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಮುಂದೆ ನಡೀತು ಭಯಾನಕ ಘಟನೆ

bulan-bank

ಬುಲಂದ್ ಶಹರ್: ನೋಟ್ ಬ್ಯಾನ್ ಮಾಡಿದ ನಂತರದಲ್ಲಿ, ನಗದು ಕೊರತೆ ಎದುರಾಗಿ ಜನ ಸಾಮಾನ್ಯರು ಸಂಕಷ್ಟದಲ್ಲಿದ್ದಾರೆ.

ದಿನವಿಡಿ ಬ್ಯಾಂಕ್, ಎ.ಟಿ.ಎಂ. ಬಾಗಿಲು ಕಾಯುವ ಪರಿಸ್ಥಿತಿ ಎದುರಾಗಿದ್ದು, ಹಣ ಸಿಗದೇ ತಾಳ್ಮೆ ಕಳೆದುಕೊಂಡ ಜನ ಕೆಲವೆಡೆ ಬ್ಯಾಂಕ್ ಗಳ ಮೇಲೆ ದಾಳಿ ಮಾಡಿದ ಘಟನೆಗಳೂ ನಡೆದಿವೆ. ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದ ಘಟನೆ ವಾಸ್ತವ ಸ್ಥಿತಿಯನ್ನು ಬಿಂಬಿಸುವಂತಿದೆ.

ಬುಲಂದ್ ಶಹರ್ ನಿಂದ 70 ಕಿಲೋ ಮೀಟರ್ ದೂರದ ಹಳ್ಳಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎದುರು ಜನರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.

ಭಾರೀ ಸಂಖ್ಯೆಯಲ್ಲಿ ಬ್ಯಾಂಕ್ ಎದುರು ಜನ ಜಮಾವಣೆಗೊಂಡಿದ್ದು, ಭದ್ರತಾ ಸಿಬ್ಬಂದಿ ಜಸ್ವೀರ್ ಸಿಂಗ್ ಇಬ್ಬರು ಮಹಿಳೆಯರಿಗೆ ನೇರವಾಗಿ ಗನ್ ಹಿಡಿದು ಬೆದರಿಸಿದ್ದಾನೆ.

ಇದರಿಂದ ಆಕ್ರೋಶಗೊಂಡ ಮಹಿಳೆಯರು, ಜನ ಜಂಗುಳಿಯನ್ನು ಲೆಕ್ಕಿಸದೇ, ಕಾಂಪೌಂಡ್ ಹತ್ತಿ ಸೀದಾ ಗನ್ ಹಿಡಿದಿದ್ದ ಸಿಬ್ಬಂದಿ ಬಳಿ ಹೋಗಿದ್ದು, ಆತನಿಗೆ ಚಳಿ, ಜ್ವರ ಬಿಡಿಸಿದ್ದಾರೆ.

ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದರೂ, ಅಲ್ಲಿದ್ದ ಮಹಿಳೆಯರಾಗಲಿ, ಜನರಾಗಲಿ ತಲೆಕೆಡಿಸಿಕೊಳ್ಳದೇ ಹಣ ಸಿಕ್ಕರೆ ಸಾಕು ಎಂದುಕೊಂಡಿದ್ದಾರೆ. ಅಲ್ಲಿದ್ದವರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...