alex Certify
ಕನ್ನಡ ದುನಿಯಾ       Mobile App
       

Kannada Duniya

ಪೋಲಿ ಪ್ರಯಾಣಿಕನಿಗೆ ಇಂಡಿಗೋ ಸಿಬ್ಬಂದಿ ಕಲಿಸಿದ್ಲು ಪಾಠ

ಹೈದ್ರಾಬಾದ್ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಏರ್ ಲೈನ್ಸ್ ಸಿಬ್ಬಂದಿಯೊಬ್ಳು ಅನುಚಿತವಾಗಿ ನಡೆದುಕೊಂಡ ಪ್ರಯಾಣಿಕನಿಗೆ ಸರಿಯಾಗಿ ಬುದ್ದಿ ಕಲಿಸಿದ್ದಾಳೆ. ಆಕೆ ಪಾರ್ಕಿಂಗ್ ಲಾಟ್ ನಿಂದ ವಿಮಾನ ನಿಲ್ದಾಣದ ಕಡೆಗೆ ತೆರಳುತ್ತಿದ್ಲು.

ಈ ವೇಳೆ ಇಬ್ಬರು ಪ್ರಯಾಣಿಕರು ಅವಳ ಬೆನ್ನಟ್ಟಿ ಬಂದಿದ್ದಾರೆ. ಕೂಡಲೇ ಆಕೆ ಈ ಬಗ್ಗೆ ಸಂಚಾರಿ ಪೊಲೀಸರಿಗೆ ವಿಷಯ ತಿಳಿಸಿದ್ಲು.  ಅವರು ಇಬ್ಬರನ್ನೂ ಹಿಡಿದು ತಂದಿದ್ದಾರೆ. ಅವರಲ್ಲಿ ಒಬ್ಬ ತನ್ನನ್ನು ಬಿಟ್ಟುಬಿಡಿ, ಬೇಕಾದ್ರೆ ಕಾಲು ಹಿಡೀತೀನಿ ಅಂತಾ ಗೋಗರೆಯುತ್ತಿದ್ದ. ಆತ ಮದ್ಯ ಸೇವನೆ ಮಾಡಿದ್ದ ಅಂತಾ ಇಂಡಿಗೋ ಏರ್ಲೈನ್ಸ್ ಹೇಳಿದೆ.

ಕೊನೆಗೆ ಆಕೆ ತನ್ನ ಕಾಲು ಮುಟ್ಟಿ ಕ್ಷಮೆ ಕೇಳುವಂತೆ ಆತನಿಗೆ ಸೂಚಿಸಿದ್ದಾಳೆ. ಈ ವಿಡಿಯೋ ಕೂಡ ವೈರಲ್ ಆಗಿದೆ. ಅನುಚಿತವಾಗಿ ನಡೆದುಕೊಂಡ ಇಬ್ಬರೂ ವಿದ್ಯಾರ್ಥಿಗಳಾಗಿದ್ರಿಂದ ಇಂಡಿಗೋ ಸಿಬ್ಬಂದಿ ಅವರ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸಿಲ್ಲ. ಕೆಲ ಗಂಟೆಗಳ ವಿಚಾರಣೆ ಬಳಿಕ ಇಬ್ಬರನ್ನೂ ಬಿಟ್ಟು ಕಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...