alex Certify
ಕನ್ನಡ ದುನಿಯಾ       Mobile App
       

Kannada Duniya

ಆರೋಪಿಯನ್ನು ಎಳೆದಾಡಿ ಕೆಲಸ ಕಳೆದುಕೊಂಡ ಪೊಲೀಸ್

ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಕಳ್ಳತನದ ಆರೋಪದ ಮೇಲೆ ಬಂಧಿಸಿದ ವ್ಯಕ್ತಿಯನ್ನ ಪೊಲೀಸರು ಆಸ್ಪತ್ರೆಗೆ ಬಲವಂತವಾಗಿ ಎಳೆದೊಯ್ಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ವಿವಾದ ಸೃಷ್ಟಿಯಾಗಿದ್ದು, ಆರೋಪಿಯನ್ನ ಎಳೆದೊಯ್ದ ಪೊಲೀಸರು ಕೆಲಸ ಕಳೆದುಕೊಂಡಿದ್ದಾರೆ.

ಬಂಧಿತ ಆರೋಪಿಯನ್ನ ಮೊಹಮ್ಮದ್ ಬಿಲಾಲ್ ಅಂತ ಗುರುತಿಸಲಾಗಿದೆ. ನೆರೆಮನೆಯಯವರ ಬಕೆಟ್ ಕದ್ದ ಆರೋಪದಲ್ಲಿ ಪೊಲೀಸರು ಬಿಲಾಲ್ ನನ್ನ ಬಂಧಿಸಿದ್ದರು. ಆತನನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ಕಾರಿಡಾರ್ ನಿಂದ ತಪಾಸಣಾ ಕೊಠಡಿಗೆ ಎಳೆದೊಯ್ಯಲಾಗಿದೆ. ಈ ದೃಶ್ಯಾವಳಿ ಚಿತ್ರೀಕರಿಸಿರುವ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ.

ಪೊಲೀಸರು ಬಿಲಾಲ್ ನನ್ನು ಎಳೆದೊಯ್ಯುವ ವೇಳೆ ಆತ ಪ್ರಜ್ಞೆ ತಪ್ಪಿದ್ದನೇ ಅನ್ನೋದ್ರ ಬಗ್ಗೆ ಈಗ ತನಿಖೆ ಮುಂದುವರೆದಿದೆ. ಆದ್ರೆ ಆರೋಪಿ, ಪೊಲೀಸರಿಗೆ ಸಹಕರಿಸದ ಹಿನ್ನಲೆಯಲ್ಲಿ ಆತನನ್ನ ಸಿಬ್ಬಂದಿ ಎಳೆದೊಯ್ದಿದ್ದಾಗಿ ತಿಳಿಸಿದ್ದಾರೆ. ಈ ಪ್ರಕರಣ ವಿವಾದವಾಗಿ ಬದಲಾಗ್ತಿದ್ದ ಹಾಗೆ ಬಿಲಾಲ್ನನ್ನ ಎಳೆದೊಯ್ದ ಪೊಲೀಸ್ ಪೇದೆಗಳನ್ನ ಕೆಲಸದಿಂದ ಅಮಾನತು ಮಾಡಿ ತನಿಖೆ ಮುಂದುವರೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...