alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಭವನದ 86 ಸಿಬ್ಬಂದಿಗೆ 40 ಲಕ್ಷ ರೂ. ಸಂಬಳ…!

ರಾಜಭವನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ವೇತನ ಎಷ್ಟು ಗೊತ್ತಾ…? ಇವರು ಪಡೆಯುವ ವೇತನ ಕೇಳಿದ್ರೆ ನಿಮಗೆ ಅಚ್ಚರಿ ಆಗುತ್ತದೆ. ಹೌದು, ಉತ್ತರ ಪ್ರದೇಶದ ರಾಜಭವನದಲ್ಲಿ 86 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಸಿಬ್ಬಂದಿಯ ಸಂಬಳಕ್ಕೆ ತಿಂಗಳಿಗೆ 40 ಲಕ್ಷ ರೂಪಾಯಿ ಖರ್ಚಾಗುತ್ತಿರುವ ಬಗ್ಗೆ ಆರ್.ಟಿ.ಐ. ಅಡಿ ಬಹಿರಂಗವಾಗಿದೆ.

ಯು.ಪಿ. ರಾಜಭವನದಲ್ಲಿ ಪ್ರಧಾನ ಕಾರ್ಯದರ್ಶಿ, ವಿಶೇಷ ಕಾರ್ಯದರ್ಶಿ, ಕಾನೂನು ಸಲಹೆಗಾರ, 4 ಜನ ಪರ್ಸನಲ್ ಸೆಕ್ರೆಟರಿ, ಸೆಕ್ರೆಟರಿ ಸ್ಟಾಫ್, ರಾಜಭವನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಬ್ಬ ಬಾಣಸಿಗ, ಒಬ್ಬ ಮಾಣಿ, ಆರು ಜನ ಚಾಲಕರು, ಮೂರು ಜನ ಹಿರಿಯ ಸೇವಕರು, 19 ಸೇವಕರು, ಒಬ್ಬ ಟೇಲರ್, ಒಬ್ಬ ಬಟ್ಟೆ ತೊಳೆಯುವವನು, ಕೆಲಸದಾಳುಗಳು ಸೇರಿದಂತೆ ಒಟ್ಟು 86 ಜನ ರಾಜಭವನದಲ್ಲಿ ಕೆಲಸ ಮಾಡುತ್ತಾರೆ. ಇವರಿಗೆ ತಿಂಗಳಿಗೆ 39,70,530 ಸಂಬಳ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ಇನ್ನು ರಾಜಭವನದಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರ ಸಂಖ್ಯೆ ಹಾಗೂ ಅವರ ಮಾಸಿಕ ವೇತನದ ಬಗ್ಗೆ ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಆರ್.ಟಿ.ಐ ಕಾರ್ಯಕರ್ತ ನೂತನ್ ಠಾಕೂರ್ ಕೇಳಿದ ಮಾಹಿತಿಗೆ ರಾಜಭವನದ ಸಾರ್ವಜನಿಕ ಮಾಹಿತಿ ಅಧಿಕಾರಿ ಹೇಮಂತ್ ಕುಮಾರ್ ಉತ್ತರಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...