alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗ್ರಾಮದಲ್ಲಿ ನಾಯಿಗಳೇ ಕೋಟ್ಯಾಧಿಪತಿಗಳು

ಈ ಸುದ್ದಿಯನ್ನು ನಂಬೋದು ಕಷ್ಟ. ಆದ್ರೆ ನಂಬಲೇಬೇಕು. ನಾವು ಹೇಳ್ತಿರುವ ಸುದ್ದಿ ಸತ್ಯ. ಗುಜರಾತಿನ ಮೆಹಸಾನದ ಪಂಚೋಟ್ ಹಳ್ಳಿಯ ಭೂಮಾಲೀಕರೊಬ್ಬರ ಸುದ್ದಿ ಚರ್ಚೆಗೆ ಬಂದಿದೆ. ಈ ಭೂ ಮಾಲೀಕರು ಬೇರ್ಯಾರೂ ಅಲ್ಲ. ಗ್ರಾಮದ ನಾಯಿಗಳಾಗಿದ್ದಾರೆ.

ಈ ನಾಯಿಗಳು ಟ್ರಸ್ಟ್ ಹೆಸರಿನಲ್ಲಿರುವ ಜಮೀನಿನ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತವೆ. ಮೆಹಸಾನಾ ಬೈಪಾಸ್ ನಿರ್ಮಾಣದ ನಂತ್ರ ಇಲ್ಲಿನ ಭೂಮಿ ಬೆಲೆ ಗಗನಕ್ಕೇರಿದೆ. ಇದ್ರ ಲಾಭ ನಾಯಿಗಳಿಗಾಗಿದೆ. ಗ್ರಾಮದಲ್ಲೊಂದು ಟ್ರಸ್ಟ್ ಇದೆ. ಈ ಟ್ರಸ್ಟ್ ನಲ್ಲಿ 11 ಎಕರೆ ಭೂಮಿಯಿದೆ. ಈ ಭೂಮಿಯಿಂದ ಬರುವ ಆದಾಯ ನಾಯಿಗಳಿಗೆ ಸೇರುತ್ತದೆ.

ಬೈಪಾಸ್ ಬಳಿಯಿರುವ ಈ ಜಮೀನಿನ ಬೆಲೆ ಸುಮಾರು 3.5 ಕೋಟಿಯಾಗಿದೆ. ಟ್ರಸ್ಟ್ ಬಳಿ ಸುಮಾರು 70 ನಾಯಿಗಳಿವೆ. ಅಂದ್ರೆ ಒಂದೊಂದು ನಾಯಿ ಹೆಸರಿನಲ್ಲಿ 1-1 ಕೋಟಿ ರೂಪಾಯಿಯಿದೆ. ಕೃಷಿ ಸಮಯದಲ್ಲಿ ಟ್ರಸ್ಟ್  ಭೂಮಿಯನ್ನು ಭಾಗ ಮಾಡಿ ಹರಾಜು ಪ್ರಕ್ರಿಯೆ ನಡೆಸುತ್ತದೆ. ಅತಿ ಹೆಚ್ಚು ಬೆಲೆ ಕೂಗಿದವರಿಗೆ ಒಂದು ವರ್ಷಕ್ಕೆ ಜಮೀನನ್ನು ಗುತ್ತಿಗೆ ನೀಡುತ್ತದೆ. ಹರಾಜಿನಲ್ಲಿ ಒಂದು ಭಾಗಕ್ಕೆ ಒಂದು ಲಕ್ಷಕ್ಕಿಂತಲೂ ಹೆಚ್ಚು ಹಣ ಸಿಗುತ್ತದೆ. ಇದನ್ನು ಟ್ರಸ್ಟ್ ನಾಯಿಗಳಿಗಾಗಿ ಬಳಸುತ್ತದೆ.

70 ವರ್ಷಗಳ ಹಿಂದೆ ಟ್ರಸ್ಟ್ ಬಳಿ ಈ ಜಮೀನು ಬಂದಿತ್ತು. ಜನರು ಜಮೀನನ್ನು ದಾನ ಮಾಡಿದ್ದರು. ಈಗ ಜಮೀನಿನ ಬೆಲೆ ಗಗನಕ್ಕೇರಿದೆ. ಆದ್ರೂ ಟ್ರಸ್ಟ್ ನಿಂದ ಜಮೀನನ್ನು ಯಾರೂ ವಾಪಸ್ ಕೇಳಿಲ್ಲ ಎನ್ನುತ್ತಾರೆ ಟ್ರಸ್ಟ್ ಸಿಬ್ಬಂದಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...