alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ಸತ್ಯ: ಇಲ್ಲಿ ಬಾಡಿಗೆಗೆ ಸಿಕ್ತಾರೆ ಮಹಿಳೆಯರು…!

ಇಂದು ಸಮಾಜದಲ್ಲಿ ಮಹಿಳಾ ಸಬಲೀಕರಣ, ಮಹಿಳೆಯರ ಸಮಾನತೆ, ಮಹಿಳಾ ಶಿಕ್ಷಣದ ಬಗ್ಗೆ ಅನೇಕ ಚರ್ಚೆಗಳಾಗ್ತಿವೆ. ಆದ್ರೆ ಮಧ್ಯಪ್ರದೇಶದ ಉತ್ತರ ಗ್ವಾಲಿಯರ್ ನ ಶಿವಪುರಿ ಜಿಲ್ಲೆಯ ಗ್ರಾಮವೊಂದರಲ್ಲಿ ಸ್ತ್ರೀಯರನ್ನ ಭೋಗದ ವಸ್ತುವಿನ ಹಾಗೆ ಬಾಡಿಗೆಗೆ ನೀಡಲಾಗ್ತಿದೆ ಅನ್ನೋ ವಿಚಾರ ಬೆಳಕಿಗೆ ಬಂದಿದೆ.

ಹೌದು. ಇಲ್ಲಿ ಪುರುಷರಿಗೆ ಮಹಿಳೆಯರನ್ನ ಬಾಡಿಗೆಯ ರೂಪದಲ್ಲಿ ನೀಡಲಾಗ್ತಿದೆ. ಮದುವೆಯಾಗದವರು, ಸಂಗಾತಿಗಳಿಲ್ಲದವರು 10 ರೂಪಾಯಿಯ ಸ್ಟ್ಯಾಂಪ್ ಪೇಪರ್ ಮೇಲೆ ಸಹಿ ಹಾಕಿ ಸ್ತ್ರೀಯರಿಗೆ ತಿಂಗಳಿಗೆ ಅಥವಾ ವರ್ಷಕ್ಕೆ ನಿಗದಿತ ಮೊತ್ತ ಪಾವತಿಸಿ ಬಾಡಿಗೆಗೆ ಪಡೀತಿದ್ದಾರೆ.

ಕರಾರಿನ ಅವಧಿ ಮುಗಿದ ಬಳಿಕ ಸ್ತ್ರೀಯರೊಂದಿಗೆ ಸಂಬಂಧ ಮುಂದುವರೆಸುವ ಇಚ್ಚೆ ಇದ್ದವರು ಅಗ್ರಿಮೆಂಟ್ ನವೀಕರಿಸಿಕೊಳ್ತಾರೆ. ಇಲ್ಲವಾದ್ರೆ ಅವರನ್ನ ವಾಪಸ್ಸು ಅಲ್ಲೇ ಬಿಟ್ಟುಹೋಗ್ತಿದ್ದಾರಂತೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣಗಳು ದಾಖಲಾಗದೆ ಇರೋದ್ರಿಂದ ಕಾನೂನಾತ್ಮಕ ಕ್ರಮಗಳನ್ನ ಕೈಗೊಳ್ಳೋದಕ್ಕೆ ಪೊಲೀಸರಿಗೆ ಸಾಧ್ಯವಾಗ್ತಿಲ್ಲವಂತೆ. ಸ್ತ್ರೀಯರನ್ನ ದೇವರೆಂದು ಪೂಜಿಸುವ ನಾಡಿನಲ್ಲಿ ನಡೀತಿರೋ ಇಂತಾ ವ್ಯವಸ್ಥೆಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...