alex Certify
ಕನ್ನಡ ದುನಿಯಾ       Mobile App
       

Kannada Duniya

ಅಲ್ಟ್ರಾ ಸೌಂಡ್ ವರದಿಯಲ್ಲಿ ಗರ್ಭಿಣಿಯಾದ ಯುವಕ…!

ಉತ್ತರ ಪ್ರದೇಶ ಅಲಿಗಢದ ಆಸ್ಪತ್ರೆಯೊಂದರ ಲ್ಯಾಬ್ ಯಡವಟ್ಟು ಮಾಡಿದೆ. ಯುವಕನ ಹೊಟ್ಟೆಯಲ್ಲಿ ಮಗುವಿದೆ ಎಂದು ವರದಿ ನೀಡಿದೆ. ಇದ್ರಿಂದ ಕಂಗಾಲಾದ ಯುವಕ, ಮುಖ್ಯಮಂತ್ರಿಗೆ ದೂರು ನೀಡಿ ತನಿಖೆಗೆ ಮನವಿ ಮಾಡಿದ್ದಾನೆ.

ಹೊಟ್ಟೆ ನೋವೆಂದು ಯುವಕ ಆಸ್ಪತ್ರೆಗೆ ಹೋಗಿದ್ದ ಎನ್ನಲಾಗಿದೆ. ಅಲ್ಟ್ರಾಸೌಂಡ್ ಪರೀಕ್ಷೆ ವೇಳೆ ಯುವಕನ ಹೊಟ್ಟೆಯಲ್ಲಿ ಮಗುವಿದೆ ಎಂದು ವರದಿ ನೀಡಲಾಗಿದೆ. ಯುವಕ ಸಿಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡ್ತಿದ್ದಾನೆ. ಹೊಟ್ಟೆ ನೋವಿನ ಕಾರಣ ಸನ್ ರೈಸ್ ಆಸ್ಪತ್ರೆಗೆ ಹೋಗಿದ್ದ. ಅನಕ್ಷರಸ್ಥನಾದ ಕಾರಣ ವರದಿ ಓದಲು ಸಾಧ್ಯವಾಗಲಿಲ್ಲ. ವರದಿ ನೋಡಿದ ವೈದ್ಯರು ಬೇರೆ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದ್ದರಂತೆ.

ಯುವಕ ಫ್ಯಾಕ್ಟರಿ ಹಿರಿಯ ಸಿಬ್ಬಂದಿಗೆ ವರದಿ ತೋರಿಸಿದ್ದಾನೆ. ಆಗ ವರದಿಯಲ್ಲಿರುವ ಸಂಗತಿ ಗೊತ್ತಾಗಿದೆ. ಇದ್ರಿಂದ ಯುವಕ ಕಂಗಾಲಾಗಿದ್ದಾನೆ. ವಿಷ್ಯ ಇಡೀ ಕಾರ್ಖಾನೆಗೆ ತಲುಪಿದೆ. ಎಲ್ಲರ ಅಪಹಾಸ್ಯಕ್ಕೆ ಯುವಕ ಗುರಿಯಾಗಿದ್ದಾನೆ. ಒತ್ತಡದಿಂದ ಬಳಲುತ್ತಿರುವ ಯುವಕ, ಮುಖ್ಯಮಂತ್ರಿಗೆ ದೂರು ನೀಡಿದ್ದಾನೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಡಿಎಮ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...